ಲಂಡನ್: ಇಂಗ್ಲೆಂಡ್ ತಂಡ ಟಿ-20 ಸರಣಿಗಾಗಿ 16 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ಈ ವಿಚಾರವನ್ನು ಖಚಿತಪಡಿಸಿದೆ.
ಭಾರತದಲ್ಲಿ ನಡೆಯುವ ಟಿ-20 ವಿಶ್ವಕಪ್ಗೂ ಮುನ್ನ ಇಂಗ್ಲೆಂಡ್ ತಂಡ ವಿಶ್ವಕಪ್ಗೆ ಪೂರಕವಾಗಿ ಪಾಕಿಸ್ತಾನ ವಿರುದ್ಧ ಈ ಸರಣಿಯನ್ನಾಡಲಿದೆ. ಅಕ್ಟೋಬರ್ 12ರಂದು ಕರಾಚಿಗೆ ಬರುವ ಇಂಗ್ಲೆಂಡ್ ಅಕ್ಟೋಬರ್ 14 ಮತ್ತು 15ರಂದು ಎರಡು ಟಿ-20 ಪಂದ್ಯಗಳನ್ನಾಡಲಿದೆ. ಈ ಸರಣಿ ನಂತರ ಎರಡು ತಂಡಗಳು ಅಕ್ಟೋಬರ್ 16ರಂದು ಟಿ-20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿವೆ.
-
JUST IN: England will travel to Pakistan for a T20I tour in October 2021 😍
— ICC (@ICC) November 18, 2020 " class="align-text-top noRightClick twitterSection" data="
They return to 🇵🇰 after 16 years! #PAKvENG pic.twitter.com/nZVChQNpmO
">JUST IN: England will travel to Pakistan for a T20I tour in October 2021 😍
— ICC (@ICC) November 18, 2020
They return to 🇵🇰 after 16 years! #PAKvENG pic.twitter.com/nZVChQNpmOJUST IN: England will travel to Pakistan for a T20I tour in October 2021 😍
— ICC (@ICC) November 18, 2020
They return to 🇵🇰 after 16 years! #PAKvENG pic.twitter.com/nZVChQNpmO
"2021ರ ಅಕ್ಟೋಬರ್ನಲ್ಲಿ ಇಂಗ್ಲೆಂಡ್ ಎರಡು ಟಿ-20 ಪಂದ್ಯಗಳನ್ನಾಡಲು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ಖಚಿತಪಡಿಸಲು ನನಗೆ ಸಂತೋಷವಾಗಿದೆ. ಇದು ಇಂಗ್ಲೆಂಡ್ ತಂಡದ 16 ವರ್ಷಗಳ ನಂತರ ಪಾಕಿಸ್ತಾನಕ್ಕೆ ಮೊದಲ ಭೇಟಿಯಾಗಿದೆ. ಈ ಸರಣಿ 2022-23ರ ಪ್ರವಾಸದಲ್ಲಿ ಟೆಸ್ಟ್ ಮತ್ತು ವೈಟ್ ಬಾಲ್ ಪ್ರವಾಸಕ್ಕೂ ಬಾಗಿಲು ತೆರೆಯಲಿದೆ ಎಂಬ ವಿಶ್ವಾಸವಿದೆ" ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಾಸಿಮ್ ಖಾನ್ ತಿಳಿಸಿದ್ದಾರೆ.
- — Pakistan Cricket (@TheRealPCB) November 18, 2020 " class="align-text-top noRightClick twitterSection" data="
— Pakistan Cricket (@TheRealPCB) November 18, 2020
">— Pakistan Cricket (@TheRealPCB) November 18, 2020
ನ್ಯೂಜಿಲ್ಯಾಂಡ್, ಇಂಗ್ಲೆಂಡ್ ನಂತರ ಆಸ್ಟ್ರೇಲಿಯಾ ತಂಡ ಕೂಡ ತಮ್ಮ 2022-23ರ ಎಫ್ಟಿ ಬದ್ಧತೆಗಾಗಿ ಪಾಕಿಸ್ತಾನಕ್ಕೆ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.