ETV Bharat / sports

ಟೆಸ್ಟ್​​ ಕ್ರಿಕೆಟ್​​​ನಲ್ಲಿ ಇಂಗ್ಲೆಂಡ್​ 5,00,000 ರನ್​​​​​ ಬಾರಿಸಿದ​ ಮೊದಲ ತಂಡ: 3ನೇ ಸ್ಥಾನದಲ್ಲಿ ಭಾರತ - South Africa vs England, 4th Test

ಟೆಸ್ಟ್​​ ಕ್ರಿಕೆಟ್​ ಇತಿಹಾಸದಲ್ಲಿ ಕ್ರಿಕೆಟ್​ ಜನಕ ಇಂಗ್ಲೆಂಡ್​ ತಂಡ ಒಟ್ಟು 5,00,000 ರನ್ ದಾಖಲಿಸಿದ ಮೊದಲ ತಂಡ ಎನಿಸಿಕೊಂಡಿದೆ.

England Surpass 500,000 Runs As South Africa Stage Late Fightback
ಟೆಸ್ಟ್​​ನಲ್ಲಿ ಇಂಗ್ಲೆಂಡ್​ 5,00,000 ರನ್​​ ಬಾರಿಸಿದ​ ಮೊದಲ ತಂಡ
author img

By

Published : Jan 25, 2020, 9:16 AM IST

ಜೋಹಾನ್ಸ್​ಬರ್ಗ್​​​ (ದಕ್ಷಿಣಾ ಆಫ್ರಿಕಾ): ಟೆಸ್ಟ್​​ ಕ್ರಿಕೆಟ್​ ಇತಿಹಾಸದಲ್ಲಿ ಕ್ರಿಕೆಟ್​ ಜನಕ ಇಂಗ್ಲೆಂಡ್​ ತಂಡ ಒಟ್ಟು 5,00,000 (ಅರ್ಧ ಮಿಲಿಯನ್​) ರನ್ ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.

England Surpass 500,000 Runs As South Africa Stage Late Fightback
ಎಲ್ಲಾ ತಂಡಗಳ ರನ್​​ ಪಟ್ಟಿ

ಇಂಗ್ಲೆಂಡ್​ ತಂಡ ಈವರೆಗೂ 1,022 ಪಂದ್ಯಗಳನ್ನು ಆಡಿದೆ. ನಿನ್ನೆ ನಡೆದ ದಕ್ಷಿಣಾ ಆಫ್ರಿಕಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ನಾಯಕ ಜೋ ರೂಟ್​ ಬೌಂಡರಿ ಬಾರಿಸುವ ಮೂಲಕ 7,500 ರನ್​ ಪೂರೈಸಿಕೊಂಡರು. ಬೌಂಡರಿ ಬಾರಿಸಿದ ನಂತರದ ಎಸೆತದಲ್ಲಿ ಒಂದು ರನ್​ ಗಳಿಸಿದಾಗ ಈ 5 ಲಕ್ಷ ನಂಬರ್ ಮುಟ್ಟಿತು.

ಎರಡನೇ ಸ್ಥಾನದಲ್ಲಿ 830 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ತಂಡ 4,32,706 ರನ್​​​ ಬಾರಿಸಿದೆ. ಮೂರನೇ ಸ್ಥಾನದಲ್ಲಿರುವ ಭಾರತ ತಂಡ 540 ಪಂದ್ಯಗಳಿಗೆ 2,73,518 ರನ್​ ದಾಖಲಿಸಿದೆ. ವೆಸ್ಟ್​ ಇಂಡೀಸ್​, ದಕ್ಷಿಣಾ ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್ ಕ್ರಮವಾಗಿ 4, 5, 6 ಮತ್ತು 7ನೇ ಸ್ಥಾನದಲ್ಲಿವೆ.

  • 1st team to score

    1,00,000 test runs - England
    2,00,000 test runs - England
    3,00,000 test runs - England
    4,00,000 test runs - England
    5,00,000 test runs - England (Today)*#SAvENG

    — CricBeat (@Cric_beat) January 24, 2020 " class="align-text-top noRightClick twitterSection" data=" ">

1 ಲಕ್ಷ ರನ್​​ ಪೇರಿಸಿದ ಮೊದಲ ತಂಡ ಇಂಗ್ಲೆಂಡ್​ ಆಗಿದೆ. ಹಾಗೆಯೇ 2 ಲಕ್ಷ, 3 ಲಕ್ಷ, 4 ಲಕ್ಷ, ಈಗ 5 ಲಕ್ಷ ರನ್​ ಮೊದಲು ದಾಖಲಿಸಿದ ದಾಖಲೆಯೂ ಇಂಗ್ಲೆಂಡ್​ ತನ್ನದಾಗಿಸಿಕೊಂಡಿದೆ. ನಂತರದಲ್ಲಿ ಆಸ್ಟ್ರೇಲಿಯಾ ತಂಡ ಸ್ಥಾನ ಗಿಟ್ಟಿಸಿಕೊಂಡಿದೆ.

ದಕ್ಷಿಣಾ ಆಫ್ರಿಕಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟ್​​ ಮಾಡಿದ ಇಂಗ್ಲೆಂಡ್​ ತಂಡ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 192 ರನ್​ ಗಳಿಸಿದೆ. ನಾಯಕ ಜೋರೂಟ್​ (25), ಪೋಪ್​ (22) ಕ್ರಿಸ್​​ನಲ್ಲಿದ್ದಾರೆ.

Intro:Body:

prasanna

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.