ETV Bharat / sports

178ಕ್ಕೆ ಇಂಗ್ಲೆಂಡ್ ಆಲೌಟ್​: ಭಾರತಕ್ಕೆ 420 ರನ್​ ಟಾರ್ಗೆಟ್

author img

By

Published : Feb 8, 2021, 4:21 PM IST

ರವಿಚಂದ್ರನ್ ಅಶ್ವಿನ್ ಮಾರಕ ಬೌಲಿಂಗ್ ದಾಳಿಗೆ ಕುಸಿದ ಇಂಗ್ಲೆಂಡ್ ತಂಡ 178 ರನ್​ಗಳಿಗೆ ಸರ್ವಪತನಗೊಂಡು ಆತಿಥೇಯ ಭಾರತಕ್ಕೆ 420 ರನ್​ಗಳ ಬೃಹತ್​ ಟಾರ್ಗೆಟ್ ನೀಡಿದೆ.

ಭಾರತಕ್ಕೆ 420 ರನ್​ಗಳ ಗುರಿ ನೀಡಿದ ಆಂಗ್ಲರು
ಭಾರತಕ್ಕೆ 420 ರನ್​ಗಳ ಗುರಿ ನೀಡಿದ ಆಂಗ್ಲರು

ಚೆನ್ನೈ: ಎರಡನೇ ಇನ್ನಿಂಗ್ಸ್​ನಲ್ಲಿ 178 ರನ್​ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 420 ರನ್​ಗಳ ಟಾರ್ಗೆಟ್​ ನೀಡಿದೆ.

3ನೇ ದಿನ 257 ರನ್​ಗಳಿಸಿದ್ದ ಭಾರತ ತಂಡ ಇಂದು ಆ ಮೊತ್ತಕ್ಕೆ 70 ರನ್​ ಸೇರಿಸಿ ಆಲೌಟ್​ ಆಯಿತು. ನಿನ್ನೆ 33 ರನ್​ ಗಳಿಸಿದ್ದ ವಾಷಿಂಗ್ಟನ್ ಸುಂದರ್ ಅಜೇಯ 85 ರನ್​ ಗಳಿಸಿದರೆ, ಅಶ್ವಿನ್ 31 ರನ್ ​ಗಳಿಸಿದ್ದರು.

ಇಂಗ್ಲೆಂಡ್ ಪರ ಆರ್ಚರ್​ 2, ಬೆಸ್​ 4, ಜ್ಯಾಕ್ ಲೀಚ್ 2, ಆಂಡರ್ಸನ್ 2 ವಿಕೆಟ್​ ಪಡೆದು ಮಿಂಚಿದರು.

ಇನ್ನು ಬರೋಬ್ಬರಿ 241 ರನ್​ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ರನ್​ಗಳಿಸಲು ಪರದಾಡಿತು. ರೂಟ್​ 40 ರನ್ ​ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು. ಆಲ್ಲಿ ಪೋಪ್​ 28, ಜಾಸ್ ಬಟ್ಲರ್​ 24, ಡೊಮಿನಿಕ್ ಥೀಮ್​ 25 ರನ್​ಗಳಿಸಿದರು. ಇಂಗ್ಲೆಂಡ್​ 46.3 ಓವರ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 420 ರನ್ ಟಾರ್ಗೆಟ್ ನೀಡಿದೆ.

ಭಾರತದ ಪರ ಅಶ್ವಿನ್ 6 ವಿಕೆಟ್​ ಪಡೆದು ಆಂಗ್ಲರ ಪತನಕ್ಕೆ ಕಾರಣರಾದರು. ಶಹಬಾಜ್ ನದೀಮ್ 2, ಇಶಾಂತ್ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.