ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಸೋಲನುಭವಿಸಿ ಸಂಕಷ್ಟದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಆಟಗಾರರ ಅನಾರೋಗ್ಯ ಚಿಂತೆ ಕಾಡುತ್ತಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಡಾಮ್ ಸಿಬ್ಲೆ ಕೂಡ ಆನಾರೋಗ್ಯಕ್ಕೆ ತುತ್ತಾಗಿದ್ದು, ತಂಡದಿಂದ ಹೊರಬಿದ್ದವರ ಸಂಖ್ಯೆ 11ಕ್ಕೇರಿದೆ.
ಸಿಬ್ಲೆಗೂ ಮೊದಲೇ ಒಲ್ಲಿ ಪೋಪ್, ಜಾಕ್ ಲೀಚ್ ಕೂಡ ಆನಾರೋಗ್ಯದಿಂದ ಮೊದಲ ಟೆಸ್ಟ್ ತಪ್ಪಿಸಿಕೊಂಡಿದ್ದರು. ಅಭ್ಯಾಸ ಪಂದ್ಯದ ವೇಳೆ ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಜೋ ಡೆನ್ಲಿ ಹಾಗೂ ಮಾರ್ಕ್ವುಡ್ ಆನಾರೋಗ್ಯ ಸಮಸ್ಯೆಯಿಂದ ಬಳಲಿದ್ದರು.
ಆರೋಗ್ಯ ಸಮಸ್ಯೆಯಿಂದ ಎರಡನೇ ಟೆಸ್ಟ್ ಪಂದ್ಯವನ್ನು ಕೆಲವು ಆಟಗಾರರು ಆಡುವುದು ಅನುಮಾನವಾದ್ದರಿಂದ ಇಂಗ್ಲೆಂಡ್ ತಂಡ ಕ್ರೈಗ್ ಓವರ್ಟರ್ನ್ ಹಾಗೂ ಡಾಮ್ ಬೋಸ್ರನ್ನು ಕರೆಸಿಕೊಳ್ಳಲು ನಿರ್ಧರಿಸಿದೆ. ಮಂಗಳವಾರ ಅವರಿಬ್ಬರು ದಕ್ಷಿಣ ಆಫ್ರಿಕಾ ಫ್ಲೈಟ್ ಏರಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ 107 ರನ್ಗಳಿಂದ ಗೆದ್ದು ಸರಣಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ಜನವರಿ 3 ರಿಂದ ಕೇಪ್ಟೌನ್ನಲ್ಲಿ ನಡೆಯಲಿದೆ.