ETV Bharat / sports

ಕೊರೊನಾ ವೈರಸ್​: ಭಾರತ-ಇಂಗ್ಲೆಂಡ್​ ನಡುವಿನ ಏಕದಿನ,ಟಿ-20 ಸರಣಿ 2021ಕ್ಕೆ ಮುಂದೂಡಿಕೆ!

ಭಾರತ-ಇಂಗ್ಲೆಂಡ್​ ನಡುವಿನ ನಿಗದಿತ ಓವರ್​ಗಳ ಕ್ರಿಕೆಟ್​ ಟೂರ್ನಿ ಇದೀಗ ಕೊರೊನಾ ವೈರಸ್​ ಕಾರಣ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.

author img

By

Published : Aug 7, 2020, 6:55 PM IST

Team india
Team india

ನವದೆಹಲಿ: ಭಾರತ-ಇಂಗ್ಲೆಂಡ್​ ನಡುವೆ ನಡೆಯಬೇಕಾಗಿದ್ದ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ.

ಕೊರೊನಾ ವೈರಸ್​ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್​ ಮಂಡಳಿ ಮಾಹಿತಿ ನೀಡಿದೆ. ಸೆಪ್ಟೆಂಬರ್​ ತಿಂಗಳಲ್ಲಿ ಉಭಯ ತಂಡಗಳ ನಡುವೆ ಈ ಟೂರ್ನಿ ಶುರುಗೊಳ್ಳಬೇಕಾಗಿತ್ತು. ಆದರೆ ಇದೇ ತಿಂಗಳಲ್ಲಿ ಐಪಿಎಲ್​ ಹಾಗೂ ತದನಂತರ ಟಿ-20 ವಿಶ್ವಕಪ್​ ನಡೆಯುವ ಕಾರಣ ಇದೀಗ ಈ ಟೂರ್ನಿ ಮುಂದಿನ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಮುಂದಿನ ವರ್ಷ ಜನವರಿಯಿಂದ ಮಾರ್ಚ್​​ ತಿಂಗಳವರೆಗೆ ಐದು ಟೆಸ್ಟ್​ ಪಂದ್ಯ ಭಾರತದಲ್ಲಿ ಆಡಲು ಇಂಗ್ಲೆಂಡ್​ ನಿರ್ಧರಿಸಿದೆ. ಇದರ ಮಧ್ಯೆ ಈ ಟೂರ್ನಿ ಕೂಡ ನಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್​​ 19ರಿಂದ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯಲಿದ್ದು, ತದನಂತರ ಟಿ-20 ವಿಶ್ವಕಪ್​ ಆರಂಭಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.