ETV Bharat / sports

ವಿಶ್ವಕಪ್​ ಆರಂಭದಲ್ಲೇ ದುಷ್ಕರ್ಮಿಗಳಿಂದ ಸಹೋದರನ  ಕೊಲೆ.... ನೋವಿನ ನಡುವೆ ವಿಶ್ವಕಪ್​ ಗೆದ್ದ ಆರ್ಚರ್​! - ಸಹೋದರ

ಪ್ರತಿ ಯಶಸ್ಸಿನ ವ್ಯಕ್ತಿಯ ಹಿಂದೆ ನೋವಿನ ಕಥೆ ಇರುತ್ತದೆ ಎಂಬುದಕ್ಕೆ ಜೋಫ್ರಾ ಆರ್ಚರ್​ ಜ್ವಲಂತ ಉದಾಹರಣೆ. ಸಹೋದರನ ಕೊಲೆಯಾಗಿದ್ದರೂ ತಂಡಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದಾರೆ.

ಜೋಫ್ರಾ ಆರ್ಚರ್​
author img

By

Published : Jul 16, 2019, 11:18 PM IST

ಲಂಡನ್​​: ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಯುವ ಬೌಲರ್​ ಜೋಫ್ರಾ ಆರ್ಚರ್​ ಎದುರಾಳಿ ತಂಡದ ಬ್ಯಾಟ್ಸ್​​ಮನ್​ಗಳ ಮೇಲೆ ಮಾರಕ ಬೌಲಿಂಗ್​ ದಾಳಿ ಮಾಡಿ ತಾವೊಬ್ಬ ಉತ್ತಮ ಬೌಲರ್​ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಆದರೆ ಅವರ ಅದ್ಭುತ ಪ್ರದರ್ಶನ ಹಿಂದೆ ನೋವಿನ ಕಥೆಯಿದೆ.

ವಿಶ್ವಕಪ್​​ನ ಉದ್ಘಾಟನಾ ಪಂದ್ಯದಲ್ಲಿ ಮೇ 30ರಂದು ಇಂಗ್ಲೆಂಡ್​-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ದಿನವೇ ಆರ್ಚರ್​​ ಸಹೋದರನನ್ನ ಮನೆಯ ಹೊರಗಡೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅದು ಯುವ ಬೌಲರ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೂ ಮೊದಲ ಪಂದ್ಯದಲ್ಲೇ ಆರ್ಚರ್​​ 3ವಿಕೆಟ್​ ಪಡೆದುಕೊಂಡು ಮಿಂಚಿದ್ದರು.

England Jofra Archer
ಜೋಫ್ರಾ ಆರ್ಚರ್​

ಚಿಕ್ಕವರಾಗಿದ್ದಾಗಿನಿಂದಲೂ ಒಟ್ಟಿಗೆ ಬೆಳೆದ ಸಹೋದರನ ಸಾವಿನ ಸುದ್ದಿ ಆರ್ಚರ್​ಗೆ ಮತ್ತಷ್ಟು ನೋವನ್ನುಂಟು ಮಾಡಿತ್ತು. ಈ ವೇಳೆ ಮನೆಗೆ ವಾಪಸ್​ ಹೋಗಲು ಅವರು ಮುಂದಾಗಿದ್ದರಂತೆ. ಆದರೆ, ತಂಡದ ಮ್ಯಾನೇಜ್​ಮೆಂಟ್​ ಅವರನ್ನ ಸಮಾಧಾನಪಡಿಸಿ ವಿಶ್ವಕಪ್​​ನಲ್ಲಿ ಭಾಗಿಯಾಗುವಂತೆ ಮಾಡಿತ್ತು. ಇನ್ನು ಫೈನಲ್​ ಪಂದ್ಯದಲ್ಲೂ ಆರ್ಚರ್​ ಬೌಲಿಂಗ್​​ನಲ್ಲಿ ಮಿಂಚು ಹರಿಸಿ ತಂಡ ಕಪ್ ಗೆಲ್ಲುವಂತೆ ಮಾಡಿದ್ದರು.

England Jofra Archer
ಜೋಫ್ರಾ ಆರ್ಚರ್​ ಸಂಭ್ರಮ

ತಾವು ಎಸೆದ ಸೂಪರ್​ ಓವರ್​​ನಲ್ಲಿ ಎದುರಾಳಿ ತಂಡಕ್ಕೆ ಕೇವಲ 15ರನ್​ ಬಿಟ್ಟುಕೊಟ್ಟು ತಂಡ ಚೊಚ್ಚಲ ವಿಶ್ವಕಪ್​ ಗೆಲ್ಲುವಂತೆ ಮಾಡಿದ್ದರು. ಜತೆಗೆ ವಿಶ್ವಕಪ್​ ಟೂರ್ನಿಯಲ್ಲಿ 20ವಿಕೆಟ್​ ಕಬಳಿಸಿರುವ ಶ್ರೇಯ ಕೂಡ ಅವರಿಗೆ ಸಲ್ಲುತ್ತದೆ. ಜತೆಗೆ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಪರ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಹೆಗ್ಗಳಿಕೆಯೂ ಆರ್ಚರ್​ಗೆ ಒಲಿದು ಬಂದಿದೆ.

Intro:Body:

ವಿಶ್ವಕಪ್​ ಆರಂಭವಾಗ್ತಿದ್ದಂತೆ ಸಹೋದರನ ಗುಂಡಿಕ್ಕಿ ಕೊಲೆ.... ನೋವಿನ ನಡುವೆ ವಿಶ್ವಕಪ್​ ಗೆದ್ದ ಆರ್ಚರ್​! 

ಲಂಡನ್​​: ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಯುವ ಬೌಲರ್​ ಜೋಫ್ರಾ ಆರ್ಚರ್​ ಎದುರಾಳಿ ತಂಡದ ಬ್ಯಾಟ್ಸ್​​ಮನ್​ಗಳ ಮೇಲೆ ಮಾರಕ ಬೌಲಿಂಗ್​ ದಾಳಿ ಮಾಡಿ ತಾವೊಬ್ಬ ಉತ್ತಮ ಬೌಲರ್​ ಎಂಬುದನ್ನ ಸಾಭೀತು ಪಡಿಸಿದ್ದಾರೆ. ಆದರೆ ಅವರ ಅದ್ಭುತ ಪ್ರದರ್ಶನ ಹಿಂದೆ ನೋವಿನ ಕಥೆಯಿದೆ. 

ವಿಶ್ವಕಪ್​​ನ ಉದ್ಘಾಟನಾ ಪಂದ್ಯದಲ್ಲಿ ಮೇ 30ರಂದು ಇಂಗ್ಲೆಂಡ್​-ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ದಿನವೇ ಆರ್ಚರ್​​ ಸಹೋದರನ್ನ ಮನೆಯ ಹೊರಗಡೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅದು ಯುವ ಬೌಲರ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೂ ಮೊದಲ ಪಂದ್ಯದಲ್ಲೇ ಆರ್ಚರ್​​ 3ವಿಕೆಟ್​ ಪಡೆದುಕೊಂಡು ಮಿಂಚಿದ್ದರು. 

ಚಿಕ್ಕವರಾಗಿದ್ದಾಗಿನಿಂದಲೂ ಒಟ್ಟಿಗೆ ಬೆಳೆದ ಸಹೋದರನ ಸಾವಿನ ಸುದ್ದಿ ಆರ್ಚರ್​ಗೆ ಮತ್ತಷ್ಟು ನೋವನ್ನುಟು ಮಾಡಿತ್ತು. ಈ ವೇಳೆ ಮನೆಗೆ ವಾಪಸ್​ ಹೋಗಲು ಅವರು ಮುಂದಾಗಿದ್ದರಂತೆ. ಆದರೆ ತಂಡದ ಮ್ಯಾನೆಜ್​ಮೆಂಟ್​ ಅವರನ್ನ ಸಮಾಧಾನಪಡಿಸಿ ವಿಶ್ವಕಪ್​​ನಲ್ಲಿ ಭಾಗಿಯಾಗುವಂತೆ ಮಾಡಿತ್ತು. ಇನ್ನು ಫೈನಲ್​ ಪಂದ್ಯದಲ್ಲೂ ಆರ್ಚರ್​ ಬೌಲಿಂಗ್​​ನಲ್ಲಿ ಮಿಂಚು ಹರಿಸಿ ತಂಡ ಕಪ್ ಗೆಲ್ಲುವಂತೆ ಮಾಡಿದ್ದರು. 

ತಾವು ಎಸೆದ ಸೂಪರ್​ ಓವರ್​​ನಲ್ಲಿ ಎದುರಾಳಿ ತಂಡಕ್ಕೆ ಕೇವಲ 15ರನ್​ ಬಿಟ್ಟುಕೊಟ್ಟು ತಂಡ ಚೊಚ್ಚಲ ವಿಶ್ವಕಪ್​ ಗೆಲ್ಲುವಂತೆ ಮಾಡಿದ್ದರು. ಜತೆಗೆ ವಿಶ್ವಕಪ್​ ಟೂರ್ನಿಯಲ್ಲಿ 20ವಿಕೆಟ್​ ಕಂಬಳಿಸಿರುವ ಶ್ರೇಯ ಕೂಡ ಅವರಿಗೆ ಸಲ್ಲುತ್ತದೆ. ಜತೆಗೆ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​ ಪರ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.