ETV Bharat / sports

ಫೈನಲ್​​ ಟಿ -20 ಫೈಟ್​: ಟಾಸ್​ ಸೋತ ಟೀಂ ಇಂಡಿಯಾ ಬ್ಯಾಟಿಂಗ್​, ರೋಹಿತ್ ಜತೆ ಕೊಹ್ಲಿ ಓಪನರ್​! - ಟೀಂ ಇಂಡಿಯಾ

ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಫೈನಲ್​ ಟಿ -20 ಪಂದ್ಯದಲ್ಲೂ ಆತಿಥೇಯ ಟೀಂ ಇಂಡಿಯಾ ಟಾಸ್​ ಸೋತಿದ್ದು, ಇದೀಗ ಬ್ಯಾಟಿಂಗ್​ ಮಾಡಲಿದೆ.

India vs England
India vs England
author img

By

Published : Mar 20, 2021, 6:53 PM IST

Updated : Mar 20, 2021, 7:01 PM IST

ಅಹಮದಾಬಾದ್​​: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಫೈನಲ್​ ಟಿ-20 ಪಂದ್ಯದಲ್ಲಿ ಟಾಸ್​ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಲಿದ್ದು, ಹಿಟ್​ಮ್ಯಾನ್​ ರೋಹಿತ್​ ಜೊತೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ 2-2 ಅಂತರದಲ್ಲಿ ಸಮಬಲ ಸಾಧಿಸಿದ್ದು, ಫೈನಲ್​ ಪಂದ್ಯ ಗೆಲುವ ಪಡೆ ಪ್ರಶಸ್ತಿಗೆ ಮುತ್ತಿಕ್ಕಲಿದೆ. ಇಂದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್​ಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್​ ಶರ್ಮಾ ಜತೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಇನ್ನಿಂಗ್ಸ್​ ಆರಂಭ ಮಾಡಲಿದ್ದಾರೆ.

ಇದನ್ನೂ ಓದಿ: ನಮ್ಮ ಪ್ಲೇಯರ್ಸ್​ಗೆ ಕೋವಿಡ್​​ ವ್ಯಾಕ್ಸಿನ್ ನೀಡಿ: ಬಿಸಿಸಿಐ ಬಳಿ ಡೆಲ್ಲಿ ಕ್ಯಾಪಿಟಲ್ಸ್​ ಮನವಿ!

ಆಡುವ 11ರ ಬಳಗ

ಟೀಂ ಇಂಡಿಯಾ: ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಸೂರ್ಯಕುಮಾರ್​ ಯಾದವ್​, ರಿಷಭ್ ಪಂತ್​(ವಿ.ಕೀ), ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ, ಶಾರ್ದೂಲ್​ ಠಾಕೂರ್​, ವಾಷಿಂಗ್ಟನ್​ ಸುಂದರ್​, ಭುವನೇಶ್ವರ್​ ಕುಮಾರ್​, ರಾಹುಲ್​ ಚಹರ್​, ಟಿ. ನಟರಾಜನ್​

ಇಂಗ್ಲೆಂಡ್​: ಜೇಸನ್ ರಾಯ್​, ಜೋಸ್ ಬಟ್ಲರ್​(ವಿ.ಕೀ), ಡೇವಿಡ್ ಮಲನ್​, ಬೈರ್​ಸ್ಟೋ, ಇಯಾನ್ ಮಾರ್ಗನ್​( ಕ್ಯಾಪ್ಟನ್), ಬೆನ್​ ಸ್ಟೋಕ್ಸ್​, ಸ್ಯಾಮ್​ ಕರ್ರನ್​, ಕ್ರಿಸ್ ಜೋರ್ಡನ್​, ಜೋಫ್ರಾ ಆರ್ಚರ್, ಆದಿಲ್​ ರಶೀದ್​, ಮಾರ್ಕ್​ ವುಡ್​, ಇಂದಿನ ಪಂದ್ಯದಲ್ಲಿ ಕೆಎಲ್​ ರಾಹುಲ್​ ಬದಲಿಗೆ ವೇಗದ ಬೌಲರ್​ ಟಿ. ನಟರಾಜನ್​ ಕಣಕ್ಕಿಳಿಯಲಿದ್ದು, ಇಂಗ್ಲೆಂಡ್​ ತಂಡ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

Last Updated : Mar 20, 2021, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.