ಗಾಲೆ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ದಿನವೇ ಪ್ರಾಬಲ್ಯ ಸಾಧಿಸಿದೆ.
2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ ತಂಡ ದಯನೀಯ ವೈಫಲ್ಯ ಅನುಭವಿಸಿದ್ದು, ಕೇವಲ 135 ರನ್ಗಳಿಗೆ ಆಲೌಟ್ ಆಗಿದೆ. ದುರಂತವೆಂದರೆ ತವರಿನ ಮೈದಾನದಲ್ಲಿ ಶ್ರೀಲಂಕಾ ತಂಡದ ಯಾವೊಬ್ಬ ಬ್ಯಾಟ್ಸ್ಮನ್ ಕನಿಷ್ಠ ಅರ್ಧಶತಕ ಕೂಡ ದಾಖಲಿಸಲಿಲ್ಲ. 28 ರನ್ಗಳಿಸಿದ ದಿನೇಶ್ ಚಾಂಡಿಮನ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಮ್ಯೂಥ್ಯೂಸ್ 27, ಶನಕ 23 ರನ್ಗಳಿಸಿದರು.
ಇಂಗ್ಲೆಂಡ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಡಾಮ್ ಬೆಸ್ 10.1 ಓವರ್ಗಳಲ್ಲಿ 30 ರನ್ ನೀಡಿ 5 ವಿಕೆಟ್ ಪಡೆದರು. ವೇಗಿ ಸ್ಟುವರ್ಟ್ ಬ್ರಾಡ್ 9 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಜಾಕ್ ಲೀಷ್ ಒಂದು ವಿಕೆಟ್ ಪಡೆದು ಆತಿಥೇಯ ತಂಡವನ್ನು ಗಂಟು ಮೂಟೆ ಕಟ್ಟುವಂತೆ ಮಾಡಿದರು.
ಆರಂಭಿಕ ಆಘಾತದಿಂದ ಪಾರು ಮಾಡಿದ ರೂಟ್
-
Joe Root and Jonny Bairstow fight back after early wickets to take England to 127/2 at stumps on day one 🏏
— ICC (@ICC) January 14, 2021 " class="align-text-top noRightClick twitterSection" data="
They have put up an unbeaten 110-run partnership for the third wicket 👏#SLvENG Scorecard ➞ https://t.co/uTfWpFGwrm pic.twitter.com/NBdC0gXQsK
">Joe Root and Jonny Bairstow fight back after early wickets to take England to 127/2 at stumps on day one 🏏
— ICC (@ICC) January 14, 2021
They have put up an unbeaten 110-run partnership for the third wicket 👏#SLvENG Scorecard ➞ https://t.co/uTfWpFGwrm pic.twitter.com/NBdC0gXQsKJoe Root and Jonny Bairstow fight back after early wickets to take England to 127/2 at stumps on day one 🏏
— ICC (@ICC) January 14, 2021
They have put up an unbeaten 110-run partnership for the third wicket 👏#SLvENG Scorecard ➞ https://t.co/uTfWpFGwrm pic.twitter.com/NBdC0gXQsK
ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕೆಡವಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡ 17 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಜ್ಯಾಕ್ ಕ್ರಾಲೆ(9) ಹಾಗೂ ಡೊಮೆನಿಕ್ ಸಿಬ್ಲಿ(4) ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾಗೆ ವಿಕೆಟ್ ಒಪ್ಪಿಸಿದರು.
ಆದರೆ 3ನೇ ವಿಕೆಟ್ಗೆ ಒಂದಾದ ನಾಯಕ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್ 110 ರನ್ಗಳ ಜೊತೆಯಾಟ ನಡೆಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ರೂಡ್ 115 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 66 ರನ್ ಹಾಗೂ ಬೈರ್ಸ್ಟೋವ್ 91 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 47 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು 127 ರನ್ಗಳಿಸಿದೆ.