ಲಂಡನ್ : ಕೋವಿಡ್-19 ಭೀತಿಯಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಇದೀಗ ಮೂರು ತಿಂಗಳ ವಿರಾಮದ ನಂತರ ಮತ್ತೆ ಗರಿಗೆದರಿಕೊಳ್ಳುತ್ತಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ 13 ಆಟಗಾರರ ತಂಡವನ್ನು ಇಸಿಬಿ ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ತಂಡದ ವಿರುದ್ಧ ಜುಲೈ 8ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ತಂಡದ ಕ್ಯಾಪ್ಟನ್ ರೂಟ್ ತಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಮೊದಲ ಟೆಸ್ಟ್ನಲ್ಲಿ ಭಾಗಿಯಾಗುತ್ತಿಲ್ಲ. ಆದ್ದರಿಂದ ವಿಶ್ವಕಪ್ ಹಾಗೂ ಆ್ಯಶಸ್ ಹೀರೋ ಬೆನ್ಸ್ಟೋಕ್ಸ್ಗೆ ನಾಯಕತ್ವ ಪಟ್ಟ ದಕ್ಕಿದೆ.
-
JUST IN: England have named a 13-man squad for the first Test against West Indies scheduled to start on 8 July at the Ageas Bowl. pic.twitter.com/gJ58aZbC8c
— ICC (@ICC) July 4, 2020 " class="align-text-top noRightClick twitterSection" data="
">JUST IN: England have named a 13-man squad for the first Test against West Indies scheduled to start on 8 July at the Ageas Bowl. pic.twitter.com/gJ58aZbC8c
— ICC (@ICC) July 4, 2020JUST IN: England have named a 13-man squad for the first Test against West Indies scheduled to start on 8 July at the Ageas Bowl. pic.twitter.com/gJ58aZbC8c
— ICC (@ICC) July 4, 2020
ಆರಂಭಿಕ ಬ್ಯಾಟ್ಸ್ಮನ್ ಜಾನಿ ಬ್ಯಾರ್ಸ್ಟೋವ್ ಹಾಗೂ ಆಲ್ರೌಂಡರ್ ಮೋಯಿನ್ ಅಲಿ ತಂಡದಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದ ರೋನಿ ಬರ್ನ್ಸ್ ಹಾಗೂ ಡಾಮ್ ಬೆಸ್ ತಂಡಕ್ಕೆ ಮರಳಿದ್ದಾರೆ. ಸೌತಾಂಪ್ಟನ್ ಏಜಸ್ ಬೌಲ್ನಲ್ಲಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಪ್ರೇಕ್ಷಕರಿಲ್ಲದೆ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯಲಿದೆ. ಎರಡು ಮತ್ತು 3ನೇ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಜುಲೈ 16-20 ಹಾಗೂ ಜುಲೈ 24ರಿಂದ 28ರವರೆಗೆ ನಡೆಯಲಿದೆ.
ಇಂಗ್ಲೆಂಡ್ ತಂಡ : ಬೆನ್ಸ್ಟೋಕ್ಸ್(ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋರ್ಫರಾ ಆರ್ಚರ್,ಡೊಮೆನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋನಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರೇವ್ಲೀ,ಜೋ ಡೆನ್ಲಿ, ಒಲ್ಲಿ ಪೋಪ್, ಡಾಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.