ನಾಟಿಂಗಮ್: ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ದು 3 ವಿಕೆಟ್ಗಳ ರೋಚಕ ಜಯಸಾಧಿಸಿದೆ.
ಟಾಸ್ಗೆದ್ದು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಬಾಬರ್ ಅಜಂರ ಶತಕ(115), ಮೊಹಮ್ಮದ್ ಹಫೀಜ್(57),ಫಾಖರ್ ಜಮಾನ್(59)ಅರ್ಧಶತಕ ಹಾಗೂ ಶೋಯಬ್ ಮಲಿಕ್ರ 41ರನ್ಗಳ ಸಹಾಯ ನೆರವಿನಿಂದ 50 ಓವರ್ಗಳಲ್ಲಿ 340 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 1,ಟಾಮ್ ಕರ್ರನ್ 4 ಹಾಗೂ ಮಾರ್ಕ್ವುಡ್ 2 ವಿಕೆಟ್ ಪಡೆದರು.
-
England win by three wickets!
— ICC (@ICC) May 17, 2019 " class="align-text-top noRightClick twitterSection" data="
Ben Stokes' 71* was crucial for his team as they recovered from a mini-collapse to chase down 341 with three balls remaining. pic.twitter.com/IpFRfOE7XZ
">England win by three wickets!
— ICC (@ICC) May 17, 2019
Ben Stokes' 71* was crucial for his team as they recovered from a mini-collapse to chase down 341 with three balls remaining. pic.twitter.com/IpFRfOE7XZEngland win by three wickets!
— ICC (@ICC) May 17, 2019
Ben Stokes' 71* was crucial for his team as they recovered from a mini-collapse to chase down 341 with three balls remaining. pic.twitter.com/IpFRfOE7XZ
341 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ಗೆ ಆರಂಭಿಕರಾದ ಜಾಸನ್ ರಾಯ್ (114), ಜೇಮ್ಸ್ ವಿನ್ಸ್(43) ಮೊದಲ ವಿಕೆಟ್ಗೆ 94 ರನ್ಗಳ ಜೊತೆಯಾಟ ನೀಡಿದರು. ನಂತರ ಬಂದ ರೂಟ್ 36, ಬೆನ್ಸ್ಟೋಕ್ಸ್ ಔಟಾಗದೆ 71, ಜೋ ಡೆನ್ಲಿ 17, ಟಾಮ್ ಕರ್ರನ್ 31 ಹಾಗೂ ರಶೀದ್ ಔಟಾಗದೆ 12 ರನ್ಗಳಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.
ಪಾಕ್ ಪರ ಹಸ್ನೈನ್ 2,ಇಮಾದ್ ವಾಸಿಮ್ 2, ಹಸನ್ ಅಲಿ, ಶೋಯಬ್ ಮಲಿಕ್ ಹಾಗೂ ಜುನೈದ್ ಖಾನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನ ಮೂಲಕ ಇಂಗ್ಲೆಂಡ್ 5 ಪಂದ್ಯಗಳ ಸರಣಿನ್ನು ಇನ್ನು ಒಂದು ಒಂದ್ಯ ಬಾಕಿಯಿರುವಂತೆಯೇ 3-0ಯಲ್ಲಿ ತನ್ನ ಕೈವಶ ಮಾಡಿಕೊಂಡಿತು. ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಕೊನೆಯ ಪಂದ್ಯ ಇದೇ ಭಾನುವಾರ ನಡೆಯಲಿದೆ.