ಲಂಡನ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ನಾವು ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ಐಸಿಸಿ ನೀಡಿರುವ ನಿಯಮ ನ್ಯಾಯ ಸಮ್ಮತವಾಗಿಲ್ಲ ಎಂದು ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೇಳಿಕೆ ನೀಡಿದ್ದಾರೆ.
ಫೈನಲ್ನಲ್ಲಿ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಕಿವೀಸ್ ನೀಡಿದ್ದ 241ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ಕೂಡ 241ರನ್ಗಳಿಕೆ ಮಾಡಿತ್ತು. ಈ ವೇಳೆ ಸೂಪರ್ ಓವರ್ನಲ್ಲೂ ಪಂದ್ಯ ಡ್ರಾ ಆಗಿತ್ತು, ಈ ವೇಳೆ ಐಸಿಸಿ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ಗೆಲುವು ಎಂದು ಘೋಷಣೆ ಮಾಡಿತ್ತು. ಈ ನಿಯಮದ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಇದೀಗ ಇಂಗ್ಲೆಂಡ್ ಕ್ಯಾಪ್ಟನ್ ಕೂಡ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಎದುರಾಳಿ ನ್ಯೂಜಿಲ್ಯಾಂಡ್ನಿಂದಲೂ ಸಮಬಲದ ಪ್ರದರ್ಶನ ಮೂಡಿ ಬಂದಿದೆ. ಎರಡು ತಂಡಗಳಿಂದ ಇಂತಹ ಪ್ರದರ್ಶನ ಮೂಡಿ ಬಂದಾಗಲೂ ಐಸಿಸಿ ಇಂತಹ ರಿಸಲ್ಟ್ ನೀಡಿದೆ. ಬೌಂಡರಿ ಆಧಾರದ ಮೇಲೆ ವಿಶ್ವಕಪ್ ಗೆಲುವು ನಿರ್ಧರಿಸುವುದು ಯಾವ ನ್ಯಾಯ ಎಂದು ಅವರು ಪ್ರಶ್ನೆ ಮಾಡಿದ್ದು, ಐಸಿಸಿ ನೀಡಿರುವ ಫಲಿತಾಂಶ ನ್ಯಾಯಸಮ್ಮತವಾಗಿಲ್ಲ ಎಂದು ಮಾರ್ಗನ್ ಹೇಳಿಕೆ ನೀಡಿದ್ದಾರೆ.
ಐಸಿಸಿ ನೀಡಿರುವ ಫಲಿತಾಂಶದ ವಿರುದ್ಧ ಈಗಾಗಲೇ ಕ್ರಿಕೆಟ್ ದಿಗ್ಗಜರು ಸೇರಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ವಿಶ್ವಕಪ್ ಗೆಲುವಿನ ತಂಡದ ಕ್ಯಾಪ್ಟನ್ ಖುದ್ದಾಗಿ ಈ ಬಗ್ಗೆ ಮಾತನಾಡಿದ್ದಾರೆ.