ಚಸ್ಟರ್ ಲೆ ಸ್ಟ್ರೀಟ್: ಸೆಮಿಫೈನಲ್ ತಲುಪಲು ಮಾಡು ಇಲ್ಲವೇ ಮಡಿ ಮಹತ್ವ ಪಡೆದುಕೊಂಡಿದ್ದ ಪಂದ್ಯದಲ್ಲಿ ಭರ್ಜರಿ 119 ರನ್ಗಳ ಗೆಲುವು ದಾಖಲು ಮಾಡುವ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಬೈರ್‌ಸ್ಟೋವ್ ಶತಕ (106) ಹಾಗೂ ಜೇಸನ್ ರಾಯ್ ಅರ್ಧಶತಕದ (60) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 305 ರನ್ ಪೇರಿಸಿತ್ತು.
ಇದರ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆರಂಭಿಕರಾದ ಗುಪ್ಟಿಲ್(8ರನ್), ಹನ್ರಿ(0) ನಿರಾಸೆ ಮೂಡಿಸಿದರು. ನಾಯಕ ವಿಲಿಯಮ್ಸನ್(27) ಹಾಗೂ ಟೇಲರ್(28) ರನ್ ಗಳಿಸಿದ್ದ ವೇಳೆ ರನೌಟ್ ಬಲೆಗೆ ಬಿದ್ದರು. ಹೀಗಾಗಿ ತಂಡ 69 ರನ್ ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ನಿರಾಸೆಗೊಳಗಾಯಿತು.
-
This is the first time England have qualified for the World Cup semi-finals since '92
— Cricket World Cup (@cricketworldcup) July 3, 2019 " class="align-text-top noRightClick twitterSection" data="
The similarities continue... 😛#ENGvNZ | #CWC19 pic.twitter.com/pSYYWMLYKF
">This is the first time England have qualified for the World Cup semi-finals since '92
— Cricket World Cup (@cricketworldcup) July 3, 2019
The similarities continue... 😛#ENGvNZ | #CWC19 pic.twitter.com/pSYYWMLYKFThis is the first time England have qualified for the World Cup semi-finals since '92
— Cricket World Cup (@cricketworldcup) July 3, 2019
The similarities continue... 😛#ENGvNZ | #CWC19 pic.twitter.com/pSYYWMLYKF
ಇದಾದ ಬಳಿಕ ಒಂದಾದ ಲ್ಯಾಥಮ್ ಹಾಗೂ ನೀಶಮ್ ತಂಡವನ್ನ ಎಚ್ಚರಿಕೆಯಿಂದ ಮುನ್ನಡೆಸುವ ಯತ್ನ ಮಾಡಿದರು. ಆದರೆ 19 ರನ್ ಗಳಿಕೆ ಮಾಡಿದ್ದ ನಿಶನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ಗ್ರ್ಯಾಂಡ್ಹೋಮ್(3) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಲ್ಯಾಥಮ್ (57ರನ್) ಸಮಯೋಚಿತ ಅರ್ಧಶತಕ ಸಿಡಿಸಿದರು.
ಉಳಿದಂತೆ ಸ್ಯಾಂಟ್ನರ್(12), ಸೌಥಿ(7), ಹೆನ್ರಿ(7) ಹಾಗೂ ಬೌಲ್ಟ್(4) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡ ಕೊನೆಯದಾಗಿ 45 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 186 ರನ್ಗಳಿಗೆ ಆಲೌಟ್ ಆಗಿ 119 ರನ್ಗಳ ಸೋಲು ಕಂಡಿತು.
-
Here's how the #CWC19 table looks after today's game 👀 pic.twitter.com/d0D6X6xdrd
— Cricket World Cup (@cricketworldcup) July 3, 2019 " class="align-text-top noRightClick twitterSection" data="
">Here's how the #CWC19 table looks after today's game 👀 pic.twitter.com/d0D6X6xdrd
— Cricket World Cup (@cricketworldcup) July 3, 2019Here's how the #CWC19 table looks after today's game 👀 pic.twitter.com/d0D6X6xdrd
— Cricket World Cup (@cricketworldcup) July 3, 2019
ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್ ಪಡೆದುಕೊಂಡರೆ, ವೋಕ್ಸ್, ಆರ್ಚರ್, ಪ್ಲಂಕೆಟ್, ಆದಿಲ್ ರಾಶೀದ್ ಹಾಗೂ ಸ್ಟೋಕ್ಸ್ ತಲಾ 1ವಿಕೆಟ್ ಪಡೆದುಕೊಂಡರು.
ಕಿವೀಸ್ ಸೆಮಿಫೈನಲ್ ಲಗ್ಗೆ ಬಹುತೇಕ ಖಚಿತ!
9 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ಇಂಗ್ಲೆಂಡ್ 12 ಅಂಕಗಳೊಂದಿಗೆ ಮೂರನೇ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ. ಇದರ ಮಧ್ಯೆ ಇಷ್ಟೇ ಪಂದ್ಯಗಳನ್ನಾಡಿರುವ ನ್ಯೂಜಿಲ್ಯಾಂಡ್ 5ರಲ್ಲಿ ಗೆದ್ದು 11 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇವತ್ತಿನ ಸೋಲಿನ ನಡುವೆ ಕೂಡ ಕಿವೀಸ್ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಲೀಗ್ನಲ್ಲಿ ಕೊನೆಯದಾಗಿ ಬಾಂಗ್ಲಾ ವಿರುದ್ಧ ಪೈಟ್ ನಡೆಸಲಿರುವ ಪಾಕಿಸ್ತಾನ 300+ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಬೇಕಾಗಿದೆ. ಅವಾಗ ಮಾತ್ರ ಪಾಕ್ ಸೆಮಿಫೈನಲ್ ಪ್ರವೇಶ ಪಡೆದುಕೊಳ್ಳಲಿದೆ.
27 ವರ್ಷಗಳ ಬಳಿಕ ಇಂಗ್ಲೆಂಡ್ ಸೆಮಿಫೈನಲ್ಗೆ!
1992ರ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ಈ ಸಾಧನೆ ಮಾಡಿರುವ ತಂಡವಾಗಿ ಹೊರಹೊಮ್ಮಿದೆ.