ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡೇವಿಡ್ ವಿಲ್ಲೆ ಕೋವಿಡ್-19 ಸೋಂಕಿಗೆ ತುತ್ತಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
30 ವರ್ಷದ ವಿಲ್ಲೆ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರ ಆಡಿದ್ದರು. ‘ನನ್ನ ಹೆಂಡತಿ ಮತ್ತು ನಾನು ಕೋವಿಡ್-19 ಸೋಂಕಿಗೆ ತುತ್ತಾಗಿದ್ದೇವೆ’ ಎಂದು ವಿಲ್ಲೆ ಟ್ವೀಟ್ ಮಾಡಿದ್ದಾರೆ.
ದೇಶೀಯ ಟಿ-20 ಲೀಗ್ ವೈಟಾಲಿಟಿ ಬ್ಲಾಸ್ಟ್‌ನ ‘ಉಳಿದ ಗ್ರೂಪ್ ಹಂತದ ಆಟಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಯಾರ್ಕ್‌ಷೈರ್ ಆಟಗಾರ ಹೇಳಿದ್ದಾರೆ.
ಶನಿವಾರ ಬೆಳಗ್ಗೆ (ನಾವು ರೋಗ ಲಕ್ಷಣಗಳನ್ನು ಹೊಂದುವ ಮೊದಲು) ಇತರ ಮೂವರು ಹುಡುಗರೊಂದಿಗೆ ಸಂಪರ್ಕದಲ್ಲಿದ್ದೆವು. ಅವರು ಅಪಾಯದಲ್ಲಿದ್ದಾರೆ ಎಂದಿದ್ದಾರೆ.
ವಿಲ್ಲೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಮ್ಯಾಥ್ಯೂ ಫಿಶರ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಜೋಶ್ ಪೋಯ್ಸ್ಡೆನ್, ಉಳಿದ ವೈಟಾಲಿಟಿ ಬ್ಲಾಸ್ಟ್ ಗ್ರೂಪ್ ಹಂತದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು YCCC ಮಾಹಿತಿ ನೀಡಿದೆ.