ETV Bharat / sports

ಎರಡು ಟೆಸ್ಟ್​ನಲ್ಲೂ ಬೌಲಿಂಗ್ ಆಯ್ದುಕೊಂಡ ವಿಂಡೀಸ್: ಇಂಗ್ಲೆಂಡ್​ ಪರ ​ಆರ್ಚರ್​ ಬದಲು ವೋಕ್ಸ್​ ಕಣಕ್ಕೆ - West Indies have won the toss and have opted to field

ಜೋ ರೂಟ್​ ತಂಡಕ್ಕೆ ಮರಳಿದ್ದು ಜೋ ಡೆನ್ಲಿ ತಂಡದಿಂದ ಹೊರಗುಳಿದಿದ್ದಾರೆ. ಉಳಿದಂತೆ, ಆ್ಯಂಡರ್ಸನ್​ ಹಾಗೂ ಮಾರ್ಕ್​ವುಡ್​ ಬದಲಿಗೆ ಸ್ಟುವರ್ಟ್​ ಬ್ರಾಡ್​ ಮತ್ತು ಸ್ಯಾಮ್​ ಕರನ್​ ಕಣಕ್ಕಿಳಿದಿದ್ದಾರೆ.

ENG VS WI SECOND TEST
ENG VS WI SECOND TEST
author img

By

Published : Jul 16, 2020, 7:33 PM IST

ಮ್ಯಾಂಚೆಸ್ಟರ್​: ವೆಸ್ಟ್​ ಇಂಡೀಸ್​ ಹಾಗೂ ಇಂಗ್ಲೆಂಡ್​ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್​ ಗೆದ್ದ ಹೋಲ್ಡರ್​ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಬಯೋ ಸೆಕ್ಯೂರ್​ ಪ್ರೋಟೋಕಾಲ್ ಉಲ್ಲಂಘಿಸಿ ತಂಡದಿಂದ ಹೊರಬಿದ್ದಿದ್ದ ಜೋಫ್ರಾ ಆರ್ಚರ್ ಬದಲಿಗೆ ಕ್ರಿಸ್​ ವೋಕ್ಸ್​ ಇಂಗ್ಲೆಂಡ್​ ಸೇರಿಕೊಂಡಿದ್ದಾರೆ.​

ಓಲ್ಡ್​ ಟ್ರಫೋರ್ಡ್ನಲ್ಲಿ ಮಳೆಯಾಗಿದ್ದರಿಂದ ಸುಮಾರು ಒಂದೂವರೆ ಗಂಟೆ ತಡವಾಗಿ ಪಂದ್ಯ ಆರಂಭಗೊಂಡಿದೆ. ಸರಣಿ ಜಯದ ಮೇಲೆ ಕಣ್ಣಿಟ್ಟಿರುವ ವಿಂಡೀಸ್​ ಟಾಸ್​ ಗೆದ್ದ ತಕ್ಷಣ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲೂ ಮೊದಲು ಫೀಲ್ಡ್​ ಮಾಡಿದ್ದರಿಂದ ಅದೇ ಮಾದರಿಯಲ್ಲಿ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಯುತ್ತಿದೆ.

ಜೋ ರೂಟ್​ ತಂಡಕ್ಕೆ ಮರಳಿದ್ದು ಜೋ ಡೆನ್ಲಿ ತಂಡದಿಂದ ಹೊರಗುಳಿದಿದ್ದಾರೆ. ಉಳಿದಂತೆ, ಆ್ಯಂಡರ್ಸನ್​ ಹಾಗೂ ಮಾರ್ಕ್​ವುಡ್​ ಬದಲಿಗೆ ಸ್ಟುವರ್ಟ್​ ಬ್ರಾಡ್​ ಮತ್ತು ಸ್ಯಾಮ್​ ಕರನ್​ ಕಣಕ್ಕಿಳಿದಿದ್ದಾರೆ.

ಸರಣಿಯನ್ನು 1-0 ಪಾಯಿಂಟುಗಳ ಮೂಲಕ ಈಗಾಗಲೆ ಮುನ್ನಡೆ ಸಾಧಿಸಿರುವ ವಿಂಡೀಸ್​ 32 ವರ್ಷಗಳ ನಂತರ ಟೆಸ್ಟ್​ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.

ಇಂಗ್ಲೆಂಡ್​ ತಂಡ:

ಜೋ ರೂಟ್ (ನಾಯಕ), ಬೆನ್​ಸ್ಟೋಕ್ಸ್​(ಉಪ ನಾಯಕ), ಕ್ರಿಸ್​ ವೋಕ್ಸ್​ ​, ಡೊಮೆನಿಕ್​ ಬೆಸ್​, ಸ್ಟುವರ್ಟ್​ ಬ್ರಾಡ್​, ರೋನಿ ಬರ್ನ್ಸ್​, ಜೋಸ್​ ಬಟ್ಲರ್​, ಜಾಕ್​ ಕ್ರೇವ್ಲೀ, ಒಲ್ಲಿ ಪೋಪ್​, ಡಾಮ್​ ಸಿಬ್ಲಿ, ಸ್ಟುವರ್ಟ್​ ಬ್ರಾಡ್​.

ವೆಸ್ಟ್​ ಇಂಡೀಸ್ ತಂಡ:

ಕ್ರೇಗ್‌ ಬ್ರಾತ್‌ವೇಟ್‌, ಜಾನ್‌ ಕ್ಯಾಂಪ್‌ಬೆಲ್‌, ಶಾಯ್​ ಹೋಪ್‌, ಶಮರ್​ ಬ್ರೂಕ್ಸ್‌, ರಾಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್(ನಾಯಕ) ಜೆರ್ಮೈನ್‌ ಬ್ಲ್ಯಾಕ್‌ವುಡ್‌, ಶೇನ್‌ ಡೊರಿಚ್ (ವಿಕೀ ‌), ‌ ಅಲ್ಜಾರಿ ಜೋಸೆಫ್​‌, ಕೆಮರ್‌ ರೋಚ್, ಶನಾನ್‌ ಗೇಬ್ರಿಯೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.