ಸೌತಾಂಪ್ಟನ್: ಯುವ ಬ್ಯಾಟ್ಸ್ಮನ್ ಜಾಕ್ ಕ್ರಾಲೆ(171) ಅವರ ಅದ್ಭುತ ಶತಕದ ನೆರವಿಂದ ಇಂಗ್ಲೆಂಡ್ ತಂಡ 322/4 ರನ್ ಗಳಿಸಿ ಮೊದಲ ದಿನದ ಗೌರವ ಪಡೆದುಕೊಂಡಿದೆ.
ಶುಕ್ರವಾರದಿಂದ ಸೌತಾಂಪ್ಟನ್ನಲ್ಲಿ ಆರಂಭವಾಗಿರುವ ಅಂತಿಮ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಆರಂಭ ಪಡೆದಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತಾದರೂ ಆರಂಭದಲ್ಲೇ ರೋನಿ ಬರ್ನ್ಸ್ 6 ರನ್ಗಳಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಕ್ರಾಲೆ 2ನೇ ವಿಕೆಟ್ಗೆ ಡಾಮ್ ಸಿಬ್ಲೀ(22) ಜೊತೆಗೆ 61 ರನ್ ಸೇರಿಸಿದರು. ಸಿಬ್ಲೀ ಯಾಸಿರ್ ಶಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
-
🏴 STUMPS 🇵🇰
— ICC (@ICC) August 21, 2020 " class="align-text-top noRightClick twitterSection" data="
A fantastic day for England, who close on 332/4 thanks to 171* from Zak Crawley 🔥 #ENGvPAK pic.twitter.com/bmOXelOIUA
">🏴 STUMPS 🇵🇰
— ICC (@ICC) August 21, 2020
A fantastic day for England, who close on 332/4 thanks to 171* from Zak Crawley 🔥 #ENGvPAK pic.twitter.com/bmOXelOIUA🏴 STUMPS 🇵🇰
— ICC (@ICC) August 21, 2020
A fantastic day for England, who close on 332/4 thanks to 171* from Zak Crawley 🔥 #ENGvPAK pic.twitter.com/bmOXelOIUA
ನಂತರ ಕ್ರಾಲೆ ಜೊತೆಗೂಡಿದ ನಾಯಕ ರೂಟ್(29) 41 ರನ್ಗಳ ಜೊತೆಯಾಟ ನಡೆಸಿದರು. ಆದರೆ, 29 ರನ್ ಗಳಿಸಿದ್ದ ವೇಳೆ ಯುವ ಬ್ಯಾಟ್ಸ್ಮನ್ ನಸೀಮ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ರಿಜ್ವಾನ್ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಒಲ್ಲಿ ಪೋಪ್(3) ರನ್ ಗಳಿಸಿ ಯಾಸಿರ್ ಶಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಆದರೆ, 5ನೇ ವಿಕೆಟ್ ಜೊತೆಯಾಟದಲ್ಲಿ ಕ್ರಾಲೆ ಜೊತೆ ಒಂದಾದ ಕಳೆದ ಪಂದ್ಯದ ಹೀರೋ ಜೋಸ್ ಬಟ್ಲರ್(87) 200 ರನ್ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ.
269 ಎಸೆತಗಳನ್ನು ಎದುರಿಸಿರುವ ಕ್ರಾಲೆ 19 ಬೌಂಡರಿಗಳಿಂದ ಔಟಾಗದೇ 171 ರನ್ ಗಳಿಸಿದ್ದಾರೆ. ಬಟ್ಲರ್ 148 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ ಔಟಾಗದೇ 87 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಾಕಿಸ್ತಾನ ಪರ ಯಾಸಿರ್ ಶಾ 2 ವಿಕೆಟ್, ನಸೀಮ್ ಹಾಗೂ ಶಾಹೀನ್ ಅಫ್ರಿದಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.