ETV Bharat / sports

ಬಿಲ್​ ಅವರೇ ಕೊಡೋದಾದ್ರೆ, ಡಿನ್ನರ್​ಗೆ​ ರೆಡಿ: ಮುರುಳಿ ವಿಜಯ್​ ಬಯಕೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಪೆರ್ರಿ

author img

By

Published : May 6, 2020, 8:27 AM IST

ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಎಲಿಸ್​ ಪೆರ್ರಿ ಮುರುಳಿ ವಿಜಯ್​ ಅವರ ಜೊತೆ ಡಿನ್ನರ್​ಗೆ ಹೋಗಲು ಸಿದ್ದವಿದ್ದು, ಬಿಲ್​ ಅವರೆ ಕೊಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ.

ಮುರುಳಿ ವಿಜಯ್​ ಬಯಕೆಗೆ ಗ್ರೀನ್​ ಸಿಗ್ನಲ್​ ಕೊಟ್ಟ ಪೆರ್ರಿ

ಸಿಡ್ನಿ:ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್​ರೌಂಡರ್​ ಎಲಿಸ್​ ಪೆರ್ರಿ, ಮುರುಳಿ ವಿಜಯ್​ ಅವರ ಬಯಕೆಯಂತೆ ಜೊತೆಯಾಗಿ ಡಿನ್ನರ್​ ಮಾಡುವ ವಿಚಾರಕ್ಕೆ ತಮಾಷೆಯ ಉತ್ತರ ನೀಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಆ್ಯಂಕರ್​ ರೂಪ ರಮಣಿ ನಡೆಸಿದ ಲೈವ್​ ಕಾರ್ಯಕ್ರಮದಲ್ಲಿ ಯಾವ ಕ್ರಿಕೆಟಿಗರ ಜೊತೆ ಡಿನ್ನರ್​ಗೆ ಹೋಗುತ್ತೀರ? ಎಂಬುದಕ್ಕೆ ವಿಜಯ್​ ಆಸ್ಟ್ರೇಲಿಯಾದ ಎಲಿಸ್​ ಪೆರ್ರಿ ಹಾಗೂ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​​ ಅವರ ಹೆಸರನ್ನು ಸೂಚಿಸಿದ್ದರು.

"ಎಲಿಸ್​ ಪೆರ್ರಿ, ತುಂಬಾ ಸುಂದರವಾಗಿದ್ದಾರೆ ಅದಕ್ಕಾಗಿ, ಧವನ್​ ತುಂಬಾ ತಮಾಷೆ ಮಾಡುತ್ತಾರೆ, ನಾವಿಬ್ಬರು ಜೊತೆ ಸೇರಿದಾಗ ಅವರು ಹಿಂದಿಯಲ್ಲಿ ಮಾತನಾಡಿದರೆ, ನಾನು ತಮಿಳಿನಲ್ಲಿ ಉತ್ತರಿಸುತ್ತೇನೆ" ಇದ್ದಕ್ಕಾಗಿ ಇವರಿಬ್ಬರನ್ನು ಆಯ್ಕೆ ಮಾಡಿರುವುದಾಗಿ ವಿಜಯ್​ ತಿಳಿಸಿದ್ದರು.

ರಿಧಿಮಾ ಪಠಾಕ್​ ನಡೆಸಿದ ಲೈವ್​, ಕಾರ್ಯಕ್ರಮದಲ್ಲಿ ವಿಜಯ್​ ಅವರ ಬಯಕೆಯ ವಿಚಾರವನ್ನು ಪೆರ್ರಿಗೆ ತಿಳಿಸಿದ್ದಾರೆ. "ಅವರೇ ಬಿಲ್​ ಪಾವತಿಸಲಿದ್ದಾರೆಂದು ಭಾವಿಸಿದ್ದೇನೆ ಎಂದು ಪೆರ್ರಿ ತಮಾಷೆಯಾಗಿ ಉತ್ತರಿಸಿದ್ದಾರೆ, ಇನ್ನು ಸುಂದರವಾಗಿದ್ದಾರೆ ಎಂಬ ವಿಜಯ್​ ಕಾಮೆಂಟ್​ಗೆ ಪ್ರಶಂಶಿಸುತ್ತೇನೆ ಎಂದು ಪೆರ್ರಿ ಹೇಳಿದ್ದಾರೆ.

5ನೇ ಬಾರಿಗೆ ಟಿ20 ವಿಶ್ವಚಾಂಪಿಯನ್​ ಆದ ಆಸ್ಟ್ರೇಲಿಯಾ ತಂಡ ಭಾಗವಾಗಿದ್ದ ಪೆರ್ರಿ ಗಾಯದ ಕಾರಣ ಭಾರತದ ವಿರುದ್ಧದ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದರು. ಪೆರ್ರಿ ವಿರಾಟ್​,ಎಬಿಡಿ,ಡೇಲ್​ ಸ್ಟೈನ್​ ಹಾಗೂ ಸ್ಟಿವ್​ ಸ್ಮಿತ್​ ಜೊತೆಗೆ ದಶಕದ ವಿಸ್ಟನ್​ ಕ್ರಿಕೆಟರ್​ ಗೌರವಕ್ಕೆ ಪಾತ್ರರಾಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5000 ರನ್​ ಹಾಗೂ 200 ವಿಕೆಟ್​ ಪಡೆದಿರುವ ಪೆರ್ರಿ ವಿಶ್ವದ ಅತ್ಯುತ್ತಮ ಮಹಿಳಾ ಆಲ್​ರೌಂಡರ್​ ಎಂಬ ಖ್ಯಾತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.