ದುಬೈ : 2022ರ ಜುಲೈ 28ರಿಂದ ಆಗಸ್ಟ್ 8ರವರೆಗೆ ಇಂಗ್ಲೆಂಡ್ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಗೊಳ್ಳುತ್ತಿದೆ. ಟೂರ್ನಿಯ ಅರ್ಹತಾ ಪ್ರಕ್ರಿಯೆಯನ್ನ ಕಾಮನ್‍ವೆಲ್ತ್ ಗೇಮ್ಸ್ ಫೆಡರೇಷನ್(ಸಿಜಿಎಫ್) ಮತ್ತು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬುಧವಾರ ಬಿಡುಗಡೆ ಮಾಡಿದೆ.
1998ರ ಕಾಮನ್‍ವೆಲ್ತ್ ಗೇಮ್ಸ್ನಲ್ಲಿ ಪುರುಷರ ಕ್ರಿಕೆಟ್ ತಂಡ ಭಾಗವಹಿಸಿತ್ತು. ಇದೀಗ ಬರೋಬ್ಬರಿ 24 ವರ್ಷಗಳ ನಂತರ ಮಹಿಳಾ ತಂಡ ಸೇರ್ಪಡೆಯಾಗುತ್ತಿದೆ.
ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಐಸಿಸಿ ಕಾಮನ್‍ವೆಲ್ತ್ ಗೇಮ್ಸ್ ಆಯೋಜಕರಿಗೆ ಮನವಿ ಸಲ್ಲಿಸಿಕೆ ಮಾಡಿತ್ತು. ಮಹಿಳಾ ಕ್ರಿಕೆಟ್‍ಗೆ ಜಾಗತಿಕ ಮನ್ನಣೆ ಕಲ್ಪಿಸಲು ಐಸಿಸಿ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕ್ರಮಕ್ಕೆ ಮುಂದಾಗಿದೆ.
-
Hosts England have secured a spot at the 2022 Commonwealth Games and captain Heather Knight is looking forward to the special event 💬 pic.twitter.com/wpFp0zn5G4
— ICC (@ICC) November 18, 2020 " class="align-text-top noRightClick twitterSection" data="
">Hosts England have secured a spot at the 2022 Commonwealth Games and captain Heather Knight is looking forward to the special event 💬 pic.twitter.com/wpFp0zn5G4
— ICC (@ICC) November 18, 2020Hosts England have secured a spot at the 2022 Commonwealth Games and captain Heather Knight is looking forward to the special event 💬 pic.twitter.com/wpFp0zn5G4
— ICC (@ICC) November 18, 2020
ಇಂದು ಬಿಡುಗಡೆಯಾಗಿರುವ ಟೂರ್ನಿಯ ಅರ್ಹತಾ ಮಾನದಂಡಗಳ ಪ್ರಕಾರ ಟೂರ್ನಿ ಆಯೋಜಿಸುವ ಇಂಗ್ಲೆಂಡ್ ತಂಡಕ್ಕೆ ನೇರ ಅರ್ಹತೆ ಕಲ್ಪಿಸಿಕೊಡಲಾಗಿದೆ. ಏಪ್ರಿಲ್ 1, 2021ರ ವೇಳೆಗೆ ಐಸಿಸಿ ಮಹಿಳೆಯರ ರ್ಯಾಂಕಿಂಗ್ ಪಟ್ಟಿಯಲ್ಲಿ ಉಳಿಯುವ 6 ತಂಡಗಳು ಕೂಡ ನೇರ ಅರ್ಹತೆ ಪಡೆಯಲಿವೆ.
ಕಾಮನ್‍ವೆಲ್ತ್ ಗೇಮ್ಸ್ ಅರ್ಹತಾ ಸುತ್ತಿನಲ್ಲಿ ವಿಜೇತವಾಗುವ ತಂಡ 8ನೇ ತಂಡವಾಗಿ ಟೂರ್ನಿಗೆ ಅರ್ಹತೆ ಪಡೆಯಲಿದೆ. ಜನವರಿ 31 2022 ರವರೆಗೆ ಕ್ವಾಲಿಫೈಯರ್ಗೆ ಕೊನೆ ದಿನಾಂಕವಾಗಿದೆ.
ಕಾಮನ್‍ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಗೊಳಿಸಿರುವುದಕ್ಕೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ. " ಬಹುತಂಡಗಳು ಭಾಗವಹಿಸುವ ಈ ಟೂರ್ನಿ ವಿಭಿನ್ನ ಸವಾಲಾಗಲಿದೆ. ಜೊತೆಗೆ ಜವಾಬ್ದಾರಿಕೂಡ ಹೆಚ್ಚಾಗಲಿದೆ" ಎಂದು ತಿಳಿಸಿದ್ದಾರೆ.