ಸೌತಾಂಪ್ಟನ್: ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದ್ದು, ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದೆ.
-
A silver stump was presented to @StuartBroad8 before play to mark his incredible achievement of 5️⃣0️⃣0️⃣ Test wickets! 👏#ENGvPAK pic.twitter.com/aBjFYCEZvv
— England Cricket (@englandcricket) August 21, 2020 " class="align-text-top noRightClick twitterSection" data="
">A silver stump was presented to @StuartBroad8 before play to mark his incredible achievement of 5️⃣0️⃣0️⃣ Test wickets! 👏#ENGvPAK pic.twitter.com/aBjFYCEZvv
— England Cricket (@englandcricket) August 21, 2020A silver stump was presented to @StuartBroad8 before play to mark his incredible achievement of 5️⃣0️⃣0️⃣ Test wickets! 👏#ENGvPAK pic.twitter.com/aBjFYCEZvv
— England Cricket (@englandcricket) August 21, 2020
ಇಂದಿನಿಂದ ಪಾಕ್-ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭಗೊಂಡಿದೆ. ಅದಕ್ಕೂ ಮುಂಚಿತವಾಗಿ ಸ್ಟುವರ್ಟ್ ಬ್ರಾಡ್ಗೆ ಬೆಳ್ಳಿ ಸ್ಟಂಪ್ ನೀಡಿ ಗೌರವಿಸಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನ ಬ್ರಾಥ್ವೈಟ್ ವಿಕೆಟ್ ಪಡೆದುಕೊಳ್ಳುವ ಮೂಲಕ ಅವರು 500 ವಿಕೆಟ್ ಸಾಧನೆ ಮಾಡಿದ್ದಾರೆ.
ಟೆಸ್ಟ್ನಲ್ಲಿ 500 ವಿಕೆಟ್ ಪಡೆದುಕೊಂಡಿರುವ ರೆಕಾರ್ಡ್ ಈಗಾಗಲೇ ಇಂಗ್ಲೆಂಡ್ನ ಮತ್ತೋರ್ವ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೆಸರಿನಲ್ಲಿದೆ.
142 ಟೆಸ್ಟ್ ಪಂದ್ಯಗಳನ್ನಾಡಿರುವ ಬ್ರಾಡ್ 261 ಇನ್ನಿಂಗ್ಸ್ ಮೂಲಕ 511 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 18 ಸಲ 5 ವಿಕೆಟ್ ಗಳಿಸಿದ್ದು ಸಾಧನೆ ಮಾಡಿದ್ದಾರೆ. ಉಳಿದಂತೆ ಏಕದಿನ ಪಂದ್ಯಗಳಿಂದ 121 ವಿಕೆಟ್ ಹಾಗೂ ಟಿ-20 ಕ್ರಿಕೆಟ್ನಿಂದ 55 ವಿಕೆಟ್ ಕಬಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇಂದಿನಿಂದ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ.