ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ವೃತ್ತಿ, ಸಾಮಾಜಿಕ, ಧಾರ್ಮಿಕ ಸ್ಥಾನಮಾನಗಳನ್ನು ಲೆಕ್ಕಿಸದೆ ವಿಶ್ವದಾದ್ಯಂತ ಹಲವು ಜನರ ಮೇಲೆ ಪರಿಣಾಮ ಬೀರಿದೆ. ಸರ್ಕಾರಿ ವೃತ್ತಿಪರರಾಗಿರಲಿ, ಎಂಜಿನಿಯರ್ ಆಗಿರಲಿ, ಉದ್ಯಮಿಯಾಗಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನೋಪಾಯದ ಮೇಲೆ ಕೋವಿಡ್-19 ಒಂದು ನಿರ್ದಿಷ್ಟ ಮಟ್ಟಿಗೆ ಪರಿಣಾಮ ಬೀರಿದೆ.
ಮಾರ್ಚ್ನಲ್ಲಿ ವಿಶ್ವದಾದ್ಯಂತ ಸ್ಫೋಟಿಸಿದ ಕೊರೊನಾ ವೈರಸ್ ಕ್ರಿಕೆಟ್ನಂತಹ ಒಳ್ಳೆಯ ಕ್ರೀಡೆಯ ಮೇಲೂ ದುಷ್ಪರಿಣಾ ಬೀರಿದೆ. ಆರ್ಥಿಕವಾಗಿ ಬಲಾಡ್ಯವಾಗಿರುವ ದೇಶಗಳಾದ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಕ್ರಿಕೆಟ್ ಚುಟುವಟಿಕೆಗಳನ್ನು ಆರಂಭಿಸಿ ಅವರ ಸ್ಥಿತಿಯನ್ನು ಸಾಮಾನ್ಯ ಹಂತಕ್ಕೆ ತರುತ್ತಿವೆ. ಆದರೆ ಅಸೋಸಿಯೇಟ್ ರಾಷ್ಟ್ರಗಳಾದ ನೆದರ್ಲ್ಯಾಂಡ್, ಅಫ್ಘಾನಿಸ್ತಾನ, ನಮೀಬಿಯಾ, ನೇಪಾಳ ಮತ್ತು ಇತರ ರಾಷ್ಟ್ರಗಳು ಸಾಂಕ್ರಾಮಿಕ ರೋಗದಿಂದ ಹೊರ ಬರಲು ಇನ್ನೂ ಹೆಣಗಾಡುತ್ತಿವೆ.
-
Should’ve been playing cricket today 😏😢 now I’m delivering Uber eats to get through the winter months!! Funny how things change hahaha keep smiling people 😁 https://t.co/kwVEIo6We9
— Paul van Meekeren (@paulvanmeekeren) November 15, 2020 " class="align-text-top noRightClick twitterSection" data="
">Should’ve been playing cricket today 😏😢 now I’m delivering Uber eats to get through the winter months!! Funny how things change hahaha keep smiling people 😁 https://t.co/kwVEIo6We9
— Paul van Meekeren (@paulvanmeekeren) November 15, 2020Should’ve been playing cricket today 😏😢 now I’m delivering Uber eats to get through the winter months!! Funny how things change hahaha keep smiling people 😁 https://t.co/kwVEIo6We9
— Paul van Meekeren (@paulvanmeekeren) November 15, 2020
ವಿಶ್ವದಾದ್ಯಂತ ಇಲ್ಲಿಯವರೆಗೆ ಒಂದು ಶತಕೋಟಿಗೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಸಾಂಕ್ರಾಮಿಕ ರೋಗದ ಮಧ್ಯೆ ಎರಡನೇ ಹಂತದ ಕ್ರಿಕೆಟ್ ರಾಷ್ಟ್ರಗಳ ಆಟಗಾರರು ತಮ್ಮ ಜೀವನದ ಹೇಗೆ ಸಾಗಿಸುತ್ತಿದ್ದಾರೆ ಎಂಬುದರ ಕುರಿತು ನೆದರ್ಲ್ಯಾಂಡ್ ಕ್ರಿಕೆಟಿಗ ಪಾಲ್ ವ್ಯಾನ್ ಮೀಕರೆನ್ ಮಾಡಿರುವ ಇತ್ತೀಚಿನ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
ಮೂಲ ವೇಳಾಪಟ್ಟಿಯ ಪ್ರಕಾರ 2020ರ ಟಿ-20 ವಿಶ್ವಕಪ್ ಫೈನಲ್ ಪಂದ್ಯ ಇಂದು ಆಯೋಜನೆಗೊಳ್ಳಬೇಕಿತ್ತು ಎಂದು ಇಎಸ್ಪಿಎನ್ ಕ್ರಿಕೆಟ್ ವೆನ್ಸೈಟ್ ಟ್ವೀಟ್ ಮಾಡಿತ್ತು.
ಇದಕ್ಕೆ ಉತ್ತರಿಸಿರುವ ಮೀಕರನ್, ಇಂದು ಕ್ರಿಕೆಟ್ ಆಡುತ್ತಿರಬೇಕಿತ್ತು. ಆದರೆ ನಾನು ಈ ಚಳಿಗಾಲದ ತಿಂಗಳುಗಳಲ್ಲಿ ಜೀವನ ಸಾಗಿಸಲು ಊಬರ್ ಈಟ್ಸ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದ ನೆದರ್ಲ್ಯಾಂಡ್ನಲ್ಲಿ 8000 ಜನ ಸಾವನ್ನಪ್ಪಿದ್ದರು. ಅಲ್ಲಿನ ಸರ್ಕಾರ ಅಕ್ಟೋಬರ್ 14ರಂದು 4 ವಾರಗಳ ಲಾಕ್ಡೌನ್ ಘೋಷಣೆ ಮಾಡಿತ್ತು.