ETV Bharat / sports

ಟಿ20 ವಿಶ್ವಕಪ್​ ಗೆಲ್ಲಬೇಕಾದ್ರೆ ಧವನ್ ಕೈಬಿಟ್ಟು, ರಾಹುಲ್​ಗೆ ಆರಂಭಿಕ ಸ್ಥಾನ ನೀಡಬೇಕು - ಕೆ ಶ್ರೀಕಾಂತ್​- ಕೆಎಲ್​ ರಾಹುಲ್​

ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ 42 ಎಸೆತಗಳನ್ನೆದುರಿಸಿ 41ರನ್​ ಗಳಿಸಿದ್ದ ಧವನ್​ರನ್ನು ತಂಡದಿಂದ ಕೈಬಿಟ್ಟು ಕೆ ಎಲ್​ ರಾಹುಲ್​ಗೆ ಅವಕಾಶ ನೀಡಬೇಕು ಎಂದು ಭಾರತದ ಮಾಜಿ ಆಟಗಾರ ಕೆ ಶ್ರೀಕಾಂತ್​ ಅಭಿಪ್ರಾಯ ಪಟ್ಟಿದ್ದಾರೆ.

Shikhar Dhawan-kl rahul
author img

By

Published : Nov 7, 2019, 5:05 PM IST

ರಾಜ್​ಕೋಟ್​: ವಿಶ್ವಕಪ್​ನಲ್ಲಿ ಗಾಯಗೊಂಡ ನಂತರ ತಮ್ಮ ಅಸಲಿ ಫಾರ್ಮ್​ ಕಂಡುಕೊಳ್ಳುವಲ್ಲಿ ವಿಫಲರಾಗಿರುವ ಆರಂಭಿಕ ಆಟಗಾರ ಧವನ್​ರನ್ನು ತಂಡದಿಂದ ಕೈಬಿಟ್ಟು ಕೆ ಎಲ್​ ರಾಹುಲ್​ಗೆ ಅವಕಾಶ ನೀಡಬೇಕು ಎಂದು ಭಾರತ ತಂಡದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್​ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ 42 ಎಸೆತಗಳನ್ನೆದುರಿಸಿ 41ರನ್ ​ಗಳಿಸಿದ್ದರು. ಶ್ರೀಕಾಂತ್​ ಈ ವಿಚಾರವನ್ನು ಉದಾಹರಣೆಯಾಗಿ ತೆಗೆದುಕೊಂಡು ಧವನ್​ ತಂಡದ ಹಿರಿಯ ಆಟಗಾರನಾಗಿದ್ದು ,ಪವರ್​ ಪ್ಲೇನಲ್ಲಿ ರನ್​ ಗಳಿಸಲು ಪರದಾಡುತ್ತಿರುವುದು ತಂಡದ ಸೋಲಿಗೆ ಕಾರಣವಾಗಿದೆ. ಮುಂದಿನ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಧವನ್​ರನ್ನು ತಂಡದಿಂದ ಕೈಬಿಟ್ಟು ರಾಹುಲ್​ರಂತಹ ಸ್ಫೋಟಕ ಆಟಗಾರರಿಗೆ ಅವಕಾಶ ನೀಡಬೇಕು. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮುಂದುವರಿದರೆ ಪಂತ್​ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಇಳಿಸಬೇಕು. ಪಂತ್​ ಮ್ಯಾಚ್​ ಫಿನಿಶಿಂಗ್​ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಶ್ರೀಕಾಂತ್​ ತಿಳಿಸಿದ್ದಾರೆ.

ವಿಶ್ವಕಪ್​ ದೃಷ್ಟಿಯಿಂದ ಭಾರತ ಆಯ್ಕೆ ಸಮಿತಿ ಆರಂಭಿಕರನ್ನು ಬದಲಾಯಿಸುವ ಬಗ್ಗೆ ಚಿಂತಿಸಬೇಕು. ತಂಡ ಬಲಿಷ್ಠವಾಗಿದೆ. ಆದ್ರೆ ಆರಂಭಿಕರ ಕೊರತೆ ಕಾಣುತ್ತಿದೆ. ರೋಹಿತ್ ಶರ್ಮಾಗೆ ಜೊತೆಯಾಗಿ ಓರ್ವ ಸ್ಫೋಟಕ ಜೊತೆಗಾರನ ಅವಶ್ಯಕತೆ ಇದೆ. ರಾಹುಲ್​ರನ್ನು ಆರಂಭಿಕನಾಗಿ ಕಣಕ್ಕಿಳಿಸುವ ವಿಚಾರವನ್ನು ಈಗಿನಿಂದಲೇ ಆಲೋಚಿಸಿದರೆ ಒಳಿತು ಎಂದು ಶ್ರೀಕಾಂತ್​ ಸಲಹೆ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.