ETV Bharat / sports

ಧೋನಿ ನಿವೃತ್ತಿ ಬೇಡ: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಗ್ರಹ - World Cup

ಧೋನಿ ಕ್ರಿಕೆಟ್‌ ಬದುಕಿನಿಂದ ನಿವೃತ್ತಿಯಾಗದಂತೆ ಸಾವಿರಾರು ಅಭಿಮಾನಿಗಳು #donotretireDhoni ಎಂಬ ಹ್ಯಾಶ್ ಟ್ಯಾಗ್‌​ನೊಂದಿಗೆ ಟ್ವಿಟ್ಟರ್‌ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಇದು ಭಾರತದಲ್ಲಿ 2ನೇ ಟ್ವಿಟರ್​ ಟ್ರೆಂಡ್​ ಆಗಿದೆ.

Don't Retirdhoni
author img

By

Published : Jul 11, 2019, 8:09 PM IST

Updated : Jul 11, 2019, 8:19 PM IST

ಲಂಡನ್​: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈಗಲೇ ನಿವೃತ್ತಿಯಾಗುವುದು ಬೇಡ ಎಂದು ಅಭಿಮಾನಿಗಳು ಟ್ವಿಟರ್​ನಲ್ಲಿ ಬೇಡಿಕೆ ಇಟ್ಟಿದ್ದಾರೆ.

ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಧೋನಿ ಯೋಚಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಕ್ರಿಕೆಟ್​​ ದಿಗ್ಗಜರು ಹಾಗೂ ಕೆಲ ಭಾರತೀಯ ಅಭಿಮಾನಿಗಳು ಯಾವಾಗ ಭಾರತ ಸೋಲನುಭವಿಸುತ್ತದೆಯೋ ಅವತ್ತು ಧೋನಿಯನ್ನ ದೂಷಿಸುವ ಪರಿಪಾಠ ಮುಂದುವರೆಸಿದ್ದಾರೆ. ಇದು ಈ ವಿಶ್ವಕಪ್​ನಲ್ಲೂ ಕೆಲವು ಪಂದ್ಯಗಳಲ್ಲಿ ಮುಂದುವರಿದೆ.

ಇದೀಗ ಬುಧವಾರ ನಡೆದ ಸೆಮಿಫೈನಲ್​ ಪಂದ್ಯದ ವೇಳೆ ಭಾರತ 24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಕ್ರೀಸ್​ಗಾಗಮಿಸಿದ ಧೋನಿ 49ನೇ ಓವರ್​ ತನಕ ಬ್ಯಾಟಿಂಗ್​ ನಡೆಸಿ ಭಾರತದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ 49 ನೇ ಓವರ್​ನಲ್ಲಿ 2 ರನ್‌ಗಳಿಗಾಗಿ ಓಡುವ ಧಾವಂತದಲ್ಲಿ ರನ್​ಔಟ್​ ಆಗುತ್ತಿದ್ದಂತೆ 3ನೇ ವಿಶ್ವಕಪ್​ ಆಸೆಯಲ್ಲಿದ್ದ ಭಾರತೀಯರ ಕನಸು ನುಚ್ಚುನೂರಾಯಿತು.

'ಧೋನಿ ಕಡೇಯ ಪಂದ್ಯ ಇದೇ' ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುದ್ದಿ ಹರಡಿಸಿರುವುದು ಅಭಿಮಾನಿಗಳಲ್ಲಿ ಮಾತ್ರ ಆತಂಕ ಮೂಡಿಸಿದೆ. ಧೋನಿ ಈಗಲೇ ನಿವೃತ್ತಿಯಾಗುವುದು ಬೇಡ ಎಂದು #Dhoni forever, #donotretireDhoni ಎಂದು ಹ್ಯಾಶ್‌ ​ಟ್ಯಾಗ್​ನೊಡನೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಇದು ಸದ್ಯಕ್ಕೆ ದೇಶದ 2ನೇ ಟ್ವಿಟ್ಟರ್‌ ಟ್ರೆಂಡ್​ ಆಗಿದೆ.

ಪಂದ್ಯ ಮುಗಿದ ನಂತರ ಸ್ವತಃ ಎದುರಾಳಿ ನಾಯಕ ಕೇನ್​ ವಿಲಿಯಮ್ಸನ್​ ಕೂಡ ಧೋನಿಯಿಂದಲೇ ಪಂದ್ಯ ಕೂತೂಹಲಘಟ್ಟಕ್ಕೆ ಬಂದಿತ್ತು. ಜಡೇಜಾರ ಜೊತೆ ಅವರು ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿದರು ಎಂದು ಶಹಬ್ಬಾಸ್​ಗಿರಿ ನೀಡಿದ್ದರು.

ಶ್ರೀಲಂಕಾದ ಲಸಿತ್​ ಮಲಿಂಗಾ ಕೂಡ ಧೋನಿ ಇನ್ನೂ ಒಂದೆರಡು ವರ್ಷ ತಂಡದಲ್ಲಿದ್ದು, ಯುವ ಆಟಗಾರರಿಗೆ ಸ್ಪೂರ್ತಿಯಾಗಿರಬೇಕು ಎಂದು ಕೊನೇಯ ಲೀಗ್​ ಪಂದ್ಯಕ್ಕೂ ಮುನ್ನ ನಡೆದಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಆದರೆ ತಮ್ಮ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಧೋನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಾಂತ ರೀತಿಯಿಂದಿದ್ದಾರೆ. ಈ ವಿಚಾರದ ಬಗ್ಗೆ ಧೋನಿ ಪ್ರತಿಕ್ರಿಯೆಗಾಗಿ ಕೊಟ್ಯಂತರ ಅಭಿಮಾನಿಗಳು ಕಾಯುತ್ತಿದ್ದು, ಧೋನಿ ಈಗಲೇ ಅಂತರಾಷ್ಟೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದಾರೆ.

Intro:Body:Conclusion:
Last Updated : Jul 11, 2019, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.