ETV Bharat / sports

ಐಪಿಎಲ್​​ನಲ್ಲಿ ಧೋನಿ ವೈಫಲ್ಯ: ಮಾಹಿ ಮಗಳಿಗೆ ಅತ್ಯಾಚಾರದ ಬೆದರಿಕೆ!

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಧೋನಿ ವೈಫಲ್ಯಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅವರ ಐದು ವರ್ಷದ ಮಗಳನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಲಾಗಿದೆ.

MS Dhoni
MS Dhoni
author img

By

Published : Oct 9, 2020, 11:04 PM IST

Updated : Oct 10, 2020, 3:24 PM IST

ಹೈದರಾಬಾದ್​: ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಸಂಪೂರ್ಣವಾಗಿ ವಿಫಲಗೊಂಡಿದೆ. ಹೀಗಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಚಾನ್ಸ್​ ಇದ್ದರೂ ಅದನ್ನ ಕೈಚೆಲ್ಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ.

ಮೂರು ಬಾರಿಯ ಚಾಂಪಿಯನ್​ ಸಿಎಸ್​ಕೆ ತಂಡ ಇಲ್ಲಿಯವರೆಗೆ ಆಡಿರುವ ಆರು ಪಂದ್ಯಗಳಿಂದ ಕೇವಲ ಎರಡಲ್ಲಿ ಗೆಲುವು ದಾಖಲು ಮಾಡಿದ್ದು, ಹೀನಾಯ ಪ್ರದರ್ಶನ ನೀಡಿದೆ. ಕೋಲ್ಕತ್ತಾ ವಿರುದ್ಧ ಗೆಲ್ಲುವ ಅವಕಾಶವಿದ್ದರೂ ಪಂದ್ಯ ಕೈಚೆಲ್ಲಿದ ಬಳಿಕ ಸಿಎಸ್​ಕೆ ವಿರುದ್ಧ ಮತ್ತಷ್ಟು ಟೀಕೆ ಎದುರಾಗಿದ್ದು, ಇದೇ ವಿಷಯಕ್ಕೆ ತಂಡವು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೊಳಗಾಗುತ್ತಿದೆ.

ಮಗಳಿಗೆ ಅತ್ಯಾಚಾರದ ಬೆದರಿಕೆ:

ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೋಲು ಕಂಡಿದ್ದಕ್ಕಾಗಿ ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಜೊತೆಗೆ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಧೋನಿ ಮ್ಯಾಚ್​​ ಫಿಕ್ಸಿಂಗ್​ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.

  • Just saw that Dhoni's 6-year-old daughter Ziva is getting rape and death threats because he didn't play well in #IPL2020

    Do people realize what shithole we have become? Can you even imagine where we are heading as a country?

    Morally dead and decayed nation! pic.twitter.com/tYF9CsMleY

    — Aryan Srivastava (@aryansrivastav_) October 8, 2020 " class="align-text-top noRightClick twitterSection" data=" ">

ಮಹೇಂದ್ರ ಸಿಂಗ್​ ಧೋನಿ ಹಾಗೂ ಪತ್ನಿ ಸಾಕ್ಷಿ ಅವರ ಇನ್​​ಸ್ಟಾಗ್ರಾಮ್​ ಪೋಸ್ಟ್​ ಕಾಮೆಂಟ್​ ವಿಭಾಗದಲ್ಲಿ ಈ ರೀತಿಯ ಬೆದರಿಕೆ ಕಂಡು ಬಂದಿವೆ. ನಟಿ ಹಾಗೂ ರಾಜಕಾರಣಿ ನಗ್ಮಾ ಇದೇ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ರಾಷ್ಟ್ರ ಎಲ್ಲಿಗೆ ಹೋಗುತ್ತಿದೆ? ಇದು ಅಸಹ್ಯಕರವಾಗಿದೆ. ಧೋನಿ 5 ವರ್ಷದ ಮಗಳಿಗೆ ಈ ರೀತಿಯ ಬೆದರಿಕೆ ಕರೆ? ಮೋದಿಯವರೇ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಕೂಡ ಇದು ಕೇವಲ ಅಸಹ್ಯ. ನಮ್ಮ ದೇಶಕ್ಕೆ ಏನಾಗುತ್ತಿದೆ? ನಾವು ಎತ್ತ ಸಾಗುತ್ತಿದ್ದೇವೆ ಎಂದು ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.

Last Updated : Oct 10, 2020, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.