ETV Bharat / sports

ಐಸಿಸಿ ದಶಕದ ಟಿ20 ಮತ್ತು ಏಕದಿನ ತಂಡಕ್ಕೆ ಧೋನಿ ನಾಯಕ... ಕೊಹ್ಲಿ,ರೋಹಿತ್​ಗೂ ಸ್ಥಾನ - ಐಸಿಸಿ ದಶಕದ ಟಿ20

ಭಾನುವಾರ ಐಸಿಸಿ ತನ್ನ ದಶಕದ ಪ್ರಶಸ್ತಿಯನ್ನು ಪ್ರಕಟ ಮಾಡಿದೆ. ಇದರಲ್ಲಿ ದಶದಕ ಐಸಿಸಿ ಅಸೋಸಿಯೇಟೆಡ್​ ಆಟಗಾರನಾಗಿ ಸ್ಕಾಟ್ಲೆಂಡ್​ನ ಕೈಲ್​ ಕೊಯೆಟ್ಜರ್​ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಕಾಟ್ಲೆಂಡ್​ನ ಕ್ಯಾಥರಿನ್​ ಬ್ರೈಸ್​ ಆಯ್ಕೆಯಾಗಿದ್ದಾರೆ.

ಐಸಿಸಿ ದಶಕದ ತಂಡ
ಐಸಿಸಿ ದಶಕದ ತಂಡ
author img

By

Published : Dec 27, 2020, 3:34 PM IST

ಲಂಡನ್​: ಐಸಿಸಿ ದಶಕದ ಟಿ20 ಮತ್ತು ಏಕದಿನ ತಂಡವನ್ನು ಪ್ರಕಟಿಸಿದ್ದು ಎರಡೂ ತಂಡಕ್ಕೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಈ ಎರಡೂ ತಂಡದಲ್ಲೂ ಭಾರತದ ಸ್ಟಾರ್​ ಕ್ರಿಕೆಟಿಗರಾದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಅವಕಾಶ ಪಡೆದಿದ್ದಾರೆ.

ಭಾನುವಾರ ಐಸಿಸಿ ತನ್ನ ದಶಕದ ಪ್ರಶಸ್ತಿಯನ್ನು ಪ್ರಕಟ ಮಾಡಿದೆ. ಇದರಲ್ಲಿ ದಶದಕ ಐಸಿಸಿ ಅಸೋಸಿಯೇಟೆಡ್​ ಆಟಗಾರನಾಗಿ ಸ್ಕಾಟ್ಲೆಂಡ್​ನ ಕೈಲ್​ ಕೊಯೆಟ್ಜರ್​ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಕಾಟ್ಲೆಂಡ್​ನ ಕ್ಯಾಥರಿನ್​ ಬ್ರೈಸ್​ ಆಯ್ದೆಯಾಗಿದ್ದಾರೆ.

ಇನ್ನು ಐಸಿಸಿ ದಶದಕ ಟಿ20 ತಂಡದಲ್ಲಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿದ್ದಾರೆ. ಇನ್ನು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಹಾಗೂ ಬುಮ್ರಾ ಕೂಡ ದಶಕದ ತಂಡದಲ್ಲಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್​, ಮ್ಯಾಕ್ಸ್​ವೆಲ್​, ವೆಸ್ಟ್ ಇಂಡೀಸ್​ನ ಕ್ರಿಸ್​ ಗೇಲ್​ ಮತ್ತು ಕೀರನ್ ಪೊಲಾರ್ಡ್​, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​, ಶ್ರೀಲಂಕಾದ ಲಸಿತ್ ಮಾಲಿಂಗ, ಅಫ್ಘಾನಿಸ್ತಾನದ ರಶೀದ್ ಖಾನ್ ಟಿ20 ತಂಡದಲ್ಲಿದ್ದಾರೆ.

ಇನ್ನು ಏಕದಿನ ತಂಡದಲ್ಲೂ ಭಾರತದಿಂದ ಧೋನಿ, ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಯ್ಕೆಯಾಗಿದ್ದು, ಈ ತಂಡಕ್ಕೂ ಎಂಸ್​ ನಾಯಕನಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​ ಮತ್ತು ಇಮ್ರಾನ್ ತಾಹೀರ್​, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್​ ಮತ್ತು ಮಿಚೆಲ್ ಸ್ಟಾರ್ಕ್​, ಬಾಂಗ್ಲಾದೇಶದ ಶಕಿಬ್ ಅಲ್​ ಹಸನ್, ಶ್ರೀಲಂಕಾದ ಲಸಿತ್ ಮಾಲಿಂಗ, ನ್ಯೂಜಿಲ್ಯಾಂಡ್​ನ ಟ್ರೆಂಟ್​ ಬೌಲ್ಟ್​, ಇಂಗ್ಲೆಂಡ್​ ಬೆನ್​ಸ್ಟೋಕ್ಸ್​ ಅವಕಾಶ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.