ETV Bharat / sports

ನಾಯಕನಾಗಿ ಸಾಧಿಸಿದ ಮೊದಲ ಗೆಲುವಿನ ಶ್ರೇಯವನ್ನು ಧೋನಿಗೆ ಅರ್ಪಿಸಿದ ರಿಷಭ್ ಪಂತ್ - ಶಿಖರ್ ಧವನ್

ಡೆಲ್ಲಿ ತಂಡದ ಕಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿರುವುದರಿಂದ 23 ವರ್ಷದ ಯುವ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಜವಾಬ್ದಾರಿಯನ್ನು ನೀಡಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್​ಕೆ ನೀಡಿದ 189 ರನ್​ಗಳ ಗುರಿಯನ್ನು ಪೃಥ್ವಿ ಶಾ(72) ಮತ್ತು ಅನುಭವಿ ಧವನ್ ​(84) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಇನ್ನೂ 8 ಎಸೆತ ಇರುವಂತೆ ಗೆಲುವು ಸಾಧಿಸಿತು.

ನಾಯಕನಾಗಿ ಸಾಧಿಸಿದ ಮೊದಲ ಗೆಲುವನ್ನು ಧೋನಿಗೆ ಅರ್ಪಿಸಿದ ರಿಷಭ್ ಪಂತ್

author img

By

Published : Apr 11, 2021, 4:27 PM IST

ಮುಂಬೈ: ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ತಮಗೆ ಸ್ಫೂರ್ತಿಯಾಗಿರುವ ಎಂ.ಎಸ್.ಧೋನಿ ತಂಡವನ್ನೇ ಮಣಿಸಿ, ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ನೇತೃತ್ವದ ಮೊದಲ ಗೆಲುವನ್ನು ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಅರ್ಪಿಸಿದ್ದಾರೆ.

"ಟಾಸ್​ಗಾಗಿ ಧೋನಿ ಜೊತೆಯಾಗಿ ನಡೆಯುವುದು ತುಂಬಾ ವಿಶೇಷವಾದದ್ದು. ಯಾವುದೇ ಸಂದರ್ಭದಲ್ಲಿ ಅವರ ಮಾರ್ಗದರ್ಶನಕ್ಕಾಗಿ ಎದುರು ನೋಡುವ ಮೊದಲ ವ್ಯಕ್ತಿ ನಾನು. ಅವರಿಂದ ನಾನು ಸಾಕಷ್ಟನ್ನು ಕಲಿತಿದ್ದೇನೆ" ಎಂದು ಪ್ರಶಸ್ತಿ ಸಮಾರಂಭದಲ್ಲಿ ರಿಷಭ್ ಪಂತ್ ಹೇಳಿದ್ದಾರೆ.

ಡೆಲ್ಲಿ ತಂಡದ ಕಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದಿರುವುದರಿಂದ 23 ವರ್ಷದ ಯುವ ಆಟಗಾರನಿಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಜವಾಬ್ದಾರಿಯನ್ನು ನೀಡಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಸಿಎಸ್​ಕೆ ನೀಡಿದ 189 ರನ್​ಗಳ ಗುರಿಯನ್ನು ಪೃಥ್ವಿ ಶಾ(72) ಮತ್ತು ಅನುಭವಿ ಧವನ್​(84) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಇನ್ನೂ 8 ಎಸೆತ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಪಂತ್ ಶುಭಾರಂಭ ಮಾಡಿದರು.

ಪೃಥ್ವಿ ಮತ್ತು ಧವನ್​ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪಂತ್

ಒಂದು ಹಂತದಲ್ಲಿ ಚೆನ್ನೈ ಬ್ಯಾಟಿಂಗ್ ನೋಡಿ ಒತ್ತಡಕ್ಕೆ ಒಳಗಾಗಿದ್ದೆ. ಆದರೆ ಆವೇಶ್​ ಮತ್ತು ಟಾಮ್​ ಉತ್ತಮವಾಗಿ ಬೌಲಿಂಗ್ ಮಾಡಿ ಎದುರಾಳಿಯನ್ನು188 ರನ್​ಗಳಿಗೆ ನಿಯಂತ್ರಿಸಿದರು. ಚೇಸಿಂಗ್ ವೇಳೆ ಪೃಥ್ವಿ ಮತ್ತು ಧವನ್​ ಉತ್ತಮವಾಗಿ ಆಡಿದರು. ಪವರ್​ ಪ್ಲೇನಲ್ಲಿ ಸರಾಗವಾಗಿ ರನ್​ ಗಳಿಸಿದರು. ಅತ್ಯುತ್ತಮ ಕ್ರಿಕೆಟಿಂಗ್ ಶಾಟ್​ ಮೂಲಕ ಚೇಸಿಂಗ್ ತುಂಬಾ ಸುಲಭಗೊಳಿಸಿದರು ಎಂದು ಪಂತ್ ಹೇಳಿದ್ದಾರೆ.

ಶಾ ಮತ್ತು ಧವನ್​ 13.3 ಓವರ್​ಗಳಲ್ಲಿ ಮೊದಲ ವಿಕೆಟ್​ಗೆ 138 ರನ್​ಗಳ ಜೊತೆಯಾಟ ನಡೆಸಿದರು. ಶಾ ಕೇವಲ 38 ಎಸೆತಗಳಲ್ಲಿ 72 ರನ್ ​ಗಳಿಸಿದರೆ, ಧವನ್​ 54 ಎಸೆತಗಳಲ್ಲಿ 85 ರನ್​ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನು ಓದಿ:ಧವನ್-ಪೃಥ್ವಿ ಅಬ್ಬರದ ಬ್ಯಾಟಿಂಗ್​: ಚೆನ್ನೈ ವಿರುದ್ಧ ಡೆಲ್ಲಿಗೆ 7 ವಿಕೆಟ್​​ಗಳ ಅಮೋಘ ಜಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.