ETV Bharat / sports

ಹಳದಿ ಜರ್ಸಿಯಲ್ಲಿ ಕೊನೆಯ ಪಂದ್ಯವೇ ಎಂದು ಕೇಳಿದ್ದಕ್ಕೆ ಧೋನಿ ಕೊಟ್ಟ ಉತ್ತರ ಹೀಗಿದೆ.. - ಸಿಎಸ್​ಕೆ ಧೋನಿ

ಕಳೆದ ವಾರವಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್​ ಕೂಡ ಧೋನಿ ಅವರೇ ಮುಂದಿನ ಆವೃತ್ತಿಯಲ್ಲೂ ಸಿಎಸ್​ಕೆ ತಂಡವನ್ನು ಮುನ್ನಡೆಸಲಿ ಎಂಬುದು ನಮ್ಮ ಬಯಕೆಯಾಗಿದೆ..

ಎಂಎಸ್​ ಧೋನಿ ಐಪಿಎಲ್
ಎಂಎಸ್​ ಧೋನಿ ಐಪಿಎಲ್
author img

By

Published : Nov 1, 2020, 4:28 PM IST

ಅಬುಧಾಬಿ: ವಿಶ್ವದಲ್ಲೇ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಎಂ ಎಸ್​ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಐಪಿಎಲ್​ನಲ್ಲಿ ಆಡುತ್ತಿದ್ದು, ಇದು ಕೊನೆಯ ಲೀಗ್ ಆಗಬಹುದು ಎಂದು ಹಬ್ಬಿದ್ದ ಗಾಳಿ ಸುದ್ದಿಗೆ ಸ್ವತಃ ಧೋನಿಯೇ ಉತ್ತರ ಕೊಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಎಂಎಸ್​ ಧೋನಿ, ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು 11 ಬಾರಿ ಮುನ್ನಡೆಸಿದ್ದಾರೆ. ಅದರಲ್ಲಿ 10 ಬಾರಿ ಪ್ಲೇಆಫ್​ ಹಾಗೂ 8 ಬಾರಿ ಫೈನಲ್​ಗೇರಿಸಿದ್ದಾರೆ. ಅದರಲ್ಲಿ 3 ಬಾರಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದಾರೆ.

ಆದರೆ, 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನಿಯಾಗಿ ತಂಡದಿಂದ ಹೊರಬಿದ್ದಿದೆ. ಇಂದು ಪಂಜಾಬ್​ ವಿರುದ್ಧ ನಿಮ್ಮ ಪಾಲಿನ ಕೊನೆಯ ಪಂದ್ಯವಾಗಬಹುದೇ ಎಂದು ಕಾಮೆಂಟೇಟರ್ ಡಾನ್ ಮೋರಿಸನ್ ಕೇಳಿದ್ದಕ್ಕೆ ಧೋನಿ 'ಡೆಫಿನೇಟ್ಲಿ ನಾಟ್' ಎಂದು ಉತ್ತರ ಕೊಟ್ಟಿದ್ದಾರೆ.

ಕಳೆದ ವಾರವಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್​ ಕೂಡ ಧೋನಿ ಅವರೇ ಮುಂದಿನ ಆವೃತ್ತಿಯಲ್ಲೂ ಸಿಎಸ್​ಕೆ ತಂಡವನ್ನು ಮುನ್ನಡೆಸಲಿ ಎಂಬುದು ನಮ್ಮ ಬಯಕೆಯಾಗಿದೆ ಎಂದು ಹೇಳಿದ್ದರು. ಇದೀಗ ಧೋನಿ ಮಾತು ಫ್ರಾಂಚೈಸಿ ಹಾಗೂ ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.