ಶಾರ್ಜಾ: ಕೊನೆಯ ಓವರ್ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ಗೆ 5 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನ ಮೂಲಕ ಡೆಲ್ಲಿ ತಂಡ ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡರು 179 ರನ್ಗಳಿಸಿತ್ತು. ಪ್ಲೆಸಿಸ್ 58, ರಾಯುಡು 45 ಹಾಗೂ ಜಡೇಜಾ 33 ರನ್ಗಳಿಸಿದ್ದರು.
180 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಕಳೆದುಕೊಂಡರು ಇನ್ನು 1ಎಸೆತ ಇರುವಂತೆ ಗೆಲುವಿನ ನಗೆ ಬೀರಿತು. ಆರಂಭಿಕ ಪೃಥ್ವಿ ಶಾ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ಚಹಾರ್ ನಂತರ ಬಂದ ರಹಾನೆ(8)ಯನ್ನು ಔಟ್ ಮಾಡುವ ಮೂಲ ಡೆಲ್ಲಿಗೆ ಮತ್ತೊಂದು ಆಘಾತ ನೀಡಿದರು.
ಆದರೆ ನಾಯಕ ಶ್ರೇಯಸ್ ಅಯ್ಯರ್(23) ಹಾಗೂ ಸ್ಟೋಯ್ನಿಸ್(24) ರನ್ಗಳಿಸಿ ಧವನ್ಗೆ ಸಾಥ್ ನೀಡಿದರು.
ಕೊನೆಯ ಓವರ್ನಲ್ಲಿ ಡೆಲ್ಲಿಗೆ ಗೆಲ್ಲಲು 18 ರನ್ಗಳ ಅವಶ್ಯಕತೆಯಿತ್ತು. ಬ್ರಾವೋ ಗಾಯಗೊಂಡಿದ್ದರಿಂದ ಜಡೇಜಾ ಕೈಗೆ ಧೋನಿ ಬೌಲಿಂಗ್ ನೀಡಿದರು. ಅಕ್ಷರ್ ಪಟೇಲ್ ಜಡೇಜಾ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿ ಡೆಲ್ಲಿಗೆ 5 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
-
Gabbar Roars at Sharjah!
— IndianPremierLeague (@IPL) October 17, 2020 " class="align-text-top noRightClick twitterSection" data="
A 101* from @SDhawan25 as @DelhiCapitals win by 5 wickets in Match 34 of #Dream11IPL.#DCvCSK pic.twitter.com/FiwVwGgs07
">Gabbar Roars at Sharjah!
— IndianPremierLeague (@IPL) October 17, 2020
A 101* from @SDhawan25 as @DelhiCapitals win by 5 wickets in Match 34 of #Dream11IPL.#DCvCSK pic.twitter.com/FiwVwGgs07Gabbar Roars at Sharjah!
— IndianPremierLeague (@IPL) October 17, 2020
A 101* from @SDhawan25 as @DelhiCapitals win by 5 wickets in Match 34 of #Dream11IPL.#DCvCSK pic.twitter.com/FiwVwGgs07
ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಔಟಾಗದೆ ಉಳಿದ ಧವನ್ 58 ಎಸೆತಗಳಲ್ಲಿ 14 ಬೌಂಡರಿ 1 ಸಿಕ್ಸರ್ ಸಹಿತ 101 ರನ್ಗಳಿಸಿದರೆ, ಅಕ್ಷರ್ ಪಟೇಲ್ 5 ಎಸೆತಗಳಲ್ಲಿ 21 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಸಿಎಸ್ಕೆ ಪರ ದೀಪಕ್ ಚಹಾರ್ 18ಕ್ಕೆ 2, ಸ್ಯಾಮ್ ಕರನ್, ಬ್ರಾವೋ ಹಾಗೂ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.