ETV Bharat / sports

ಶಿಖರ್ ಧವನ್ ಶತಕದಬ್ಬರ: ಪಂಜಾಬ್​ಗೆ 165 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದ ಡೆಲ್ಲಿ ಕ್ಯಾಪಿಟಲ್ಸ್​ - Dhawan 2nd century

ಶಿಖರ್ ಧವನ್​ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 106 ರನ್​ಗಳಿಸಿ ಔಟಾಗದೇ ಉಳಿದರು.

ಶಿಖರ್ ಧವನ್ ಸೆಂಚುರಿ
ಶಿಖರ್ ಧವನ್ ಸೆಂಚುರಿ
author img

By

Published : Oct 20, 2020, 9:18 PM IST

ದುಬೈ: ಶಿಖರ್​ ಧವನ್​ ಅವರ ಅಬ್ಬರದ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಪಂಜಾಬ್​ ವಿರುದ್ಧ 164 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ಶಿಖರ್​ ಧವನ್​ ಶತಕ (106)ಸಿಡಿಸಿದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ಪೃಥ್ವಿ ಶಾ ಕೇವಲ 7 ರನ್​ಗಳಿಸಿ ಔಟಾಗುವ ಮೂಲಕ ಸತತ ನಾಲ್ಕನೇ ಪಂದ್ಯದಲ್ಲಿ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸಿದರು.

ನಂತರದ ಬಂದ ನಾಯಕ ಅಯ್ಯರ್​ 14, ಗಾಯದಿಂದ ಚೇತರಿಸಿಕೊಂಡು ಬಂದ ರಿಷಭ್ ಪಂತ್ 14 ರನ್​ಗಳಿಸಿ ಔಟಾಗುವ ಮೂಲಕ ನಿರಾಸೆಯನುಭವಿಸಿದರು. ಅಲ್​ರೌಂಡರ್​ ಸ್ಟೊಯ್ನಿಸ್​ ಆಟ ಕೂಡ 9 ರನ್​ಗಳಿಗೆ ಅಂತ್ಯವಾಯಿತು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಧವನ್​ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 106 ರನ್​ಗಳಿಸಿ ಔಟಾಗದೇ ಉಳಿದರು. ಹೆಟ್ಮೈರ್ 10 ರನ್​ಗಳಿಸಿದರು.

ಪಂಜಾಬ್ ಪರ ಗ್ಲೆನ್ ಮ್ಯಾಕ್ಸ್​ವೆಲ್ 31ಕ್ಕೆ1, ಮೊಹಮ್ಮದ್ ಶಮಿ 28ಕ್ಕೆ 2, ಜಿಮ್ಮಿ ನಿಶಾಮ್ 17ಕ್ಕೆ 1 ಹಾಗೂ ಮುರುಗನ್ ಅಶ್ವಿನ್ 33ಕ್ಕೆ 1 ವಿಕೆಟ್​ ಪಡೆದು ಡೆಲ್ಲಿ ರನ್​ಗತಿಗೆ ಕಡಿವಾಣ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.