ETV Bharat / sports

ಆರ್​ಸಿಬಿ ಅಭಿಮಾನಿಗಳಿಗೆ ಖುಷಿ ಸುದ್ದಿ : ಕೋವಿಡ್-19 ಟೆಸ್ಟ್​ನಲ್ಲಿ ದೇವದತ್​ ಪಡಿಕ್ಕಲ್​ಗೆ ನೆಗೆಟಿವ್ - ದೇವದತ್​ ಪಡಿಕ್ಕಲ್​ಗೆ ಕೋವಿಡ್ 19 ನೆಗೆಟಿವ್

2019ರಲ್ಲಿ ಆರ್​ಸಿಬಿ ಸೇರಿದ್ದ ಯುವ ಬ್ಯಾಟ್ಸ್​ಮನ್ 2020ರಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಅವರು 15 ಪಂದ್ಯಗಳಿಂದ 5 ಅರ್ಧಶತಕಗಳ ಸಹಿತ 473 ರನ್​ಗಳಿಸಿದ್ದರು..

ರಾಯಲ್ ಚಾಲೆಂಜರ್ಸ್ ಬೆಂಗಳೂರು
ದೇವದತ್ ಪಡಿಕ್ಕಲ್
author img

By

Published : Apr 5, 2021, 7:16 PM IST

ಚೆನ್ನೈ : ಕಳೆದ ವಾರ ಕೋವಿಡ್-19 ಟೆಸ್ಟ್​ನಲ್ಲಿ ಪಾಸಿಟಿವ್ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್​ ಇಂದು ನೆಗೆಟಿವ್​ ಫಲಿತಾಂಶ ಪಡೆದಿದ್ದಾರೆಂದು ತಿಳಿದು ಬಂದಿದೆ.

ಆದರೆ, ಆರ್​ಸಿಬಿ ಪಾಳಯ ಸೇರುವ ಮುನ್ನ ಅವರು ಮತ್ತೆ ಎರಡು ಟೆಸ್ಟ್​ಗಳಿಗೆ ಒಳಗಾಗಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಾರ್ಚ್​ 22ರಂದು ನಡೆಸಿದ್ದ ಪರೀಕ್ಷೆಯಲ್ಲಿ ಪಡಿಕ್ಕಲ್ಗೆ ಪಾಸಿಟಿವ್ ದೃಢಪಟ್ಟಿತ್ತು. ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದರು.

ವರದಿಗಳ ಪ್ರಕಾರ ದೇವದತ್​ ಪಡಿಕ್ಕಲ್ ಏಪ್ರಿಲ್ 9ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇದರ ಬಗ್ಗೆ ಫ್ರಾಂಚೈಸಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

2019ರಲ್ಲಿ ಆರ್​ಸಿಬಿ ಸೇರಿದ್ದ ಯುವ ಬ್ಯಾಟ್ಸ್​ಮನ್ 2020ರಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಅವರು 15 ಪಂದ್ಯಗಳಿಂದ 5 ಅರ್ಧಶತಕಗಳ ಸಹಿತ 473 ರನ್​ಗಳಿಸಿದ್ದರು.

ಇದನ್ನು ಓದಿ: 25 ವರ್ಷದ ಈ ಆಟಗಾರ ನನಗೆ ಪೋಲಾರ್ಡ್​ರನ್ನು ನೆನಪಿಸುತ್ತಿದ್ದಾರೆ : ಅನಿಲ್ ಕುಂಬ್ಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.