ETV Bharat / sports

ಪದಾರ್ಪಣೆ ಮಾಡಿದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಅರ್ಧಶತಕ ಸಾಧನೆ ಮಾಡಿದ ದೇವದತ್​ ಪಡಿಕ್ಕಲ್​

ಇಂದಿನ ಪಂದ್ಯದಲ್ಲಿ ಆ್ಯರೋನ್ ಫಿಂಚ್​ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟ್ಸ್​ಮನ್​ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ರನ್​ ಕಲೆಯಾಕಿದರು. ಅಸೀಸ್​ ನಾಯಕನ ಜೊತೆ ಮೊದಲ ವಿಕೆಟ್​ಗೆ ಬರೋಬ್ಬರಿ 90 ರನ್​ಗಳ ಜೊತೆಯಾಟ ನೀಡಿದರು. ಇದರಲ್ಲಿ ಪಡಿಕ್ಕಲ್​ ಪಾಲು 56 ರನ್​ ಆಗಿತ್ತು.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​
author img

By

Published : Sep 21, 2020, 11:32 PM IST

ದುಬೈ: ಮಿಲಿಯನ್​ ಡಾಲರ್​ ಟೂರ್ನಿಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್​, ಆರ್​ಸಿಬಿ ಪರ ಮೊದಲ ಪಂದ್ಯದಲ್ಲೇ ಗರಿಷ್ಠ ರನ್​ ಸಿಡಿಸಿದ 2ನೆ ಹಾಗೂ ಅರ್ಧಶತಕ ಸಿಡಿಸಿದ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಇಂದಿನ ಪಂದ್ಯದಲ್ಲಿ ಆ್ಯರೋನ್ ಫಿಂಚ್​ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟ್ಸ್​ಮನ್​ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ರನ್​ ಕಲೆಯಾಕಿದರು. ಅಸೀಸ್​ ನಾಯಕನ ಜೊತೆ ಮೊದಲ ವಿಕೆಟ್​ಗೆ ಬರೋಬ್ಬರಿ 90 ರನ್​ಗಳ ಜೊತೆಯಾಟ ನೀಡಿದರು. ಇದರಲ್ಲಿ ಪಡಿಕ್ಕಲ್​ ಪಾಲು 56 ರನ್​ ಆಗಿತ್ತು.

20 ವರ್ಷದ ಯಂಗ್ ಟೈಗರ್​ ಈ ಅರ್ಧಶತಕದ ಮೂಲಕ ಡೆಬ್ಯೂಟ್ ಪಂದ್ಯದಲ್ಲಿ ಆರ್​ಸಿಬಿ ಪರ ಹೆಚ್ಚು ರನ್​ಗಳಿಸಿದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಇವರಿಗಿಂತ ಮೊದಲು ಯುನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ತಮ್ಮ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 102 ರನ್​ ಚಚ್ಚಿದ್ದರು.

ಇದಲ್ಲದೆ ಬೆಂಗಳೂರು ತಂಡದ ಪರ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. 2008ರಲ್ಲಿ ಶ್ರೀವಾಸ್ತವ್​ ಗೋಸ್ವಾಮಿ(52) ಡೆಲ್ಲಿ ವಿರುದ್ಧ, 2011ರಲ್ಲಿ ಎಬಿ ಡಿ ವಿಲಿಯರ್ಸ್​(54) ಕೊಚ್ಚಿ ವಿರುದ್ಧ, 2011ರಲ್ಲಿ ಗೇಲ್​(102) ಕೆಕೆಆರ್​ ವಿರುದ್ಧ, 2014ರಲ್ಲಿ ಯುವರಾಜ್​ ಸಿಂಗ್​(52) ಡೆಲ್ಲಿ ವಿರುದ್ಧ ಅರ್ಧಶತಕ ದಾಖಲಿಸಿದ್ದರು.

ಇಷ್ಟಲ್ಲದೆ ಪಡಿಕ್ಕಲ್​ ಬಿಸಿಸಿಐ ಆಯೋಜನೆಯ ರಣಜಿ, ವಿಜಯ್​ ಹಜಾರೆ ಹಾಗೂ ಸಯ್ಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಗಳಲ್ಲೂ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ದಾಖಲು ಮಾಡಿದ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಇದೀಗ ಐಪಿಎಲ್​ನಲ್ಲೂ ತಮ್ಮ ಸ್ಥಿರ ಪ್ರದರ್ಶನ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 2019ರ ವಿಜಯ್​ ಹಜಾರೆ ಹಾಗೂ ಸಯ್ಯದ್​ ಮುಷ್ತಾಕ್ ಅಲಿ ಟೂರ್ನಮೆಂಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆಯೂ ಪಡಿಕ್ಕಲ್​ ಹೆಸರಿನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.