ಬೆಂಗಳೂರು : ವಿಜಯ್ ಹಜಾರೆ ಟ್ರೋಫಿಯಲ್ಲಿ ಯುವ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಅಬ್ಬರದ ಆಟ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂದು ಒಡಿಶಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಒಡಿಶಾ ವಿರುದ್ಧದ ಪಂದ್ಯದಲ್ಲಿ 119 ಎಸೆತಗಳಲ್ಲಿ ಶತಕ ಪೂರೈಸಿಸದ ಪಡಿಕ್ಕಲ್, ನಂತರ 21 ಎಸೆತಗಳಲ್ಲಿ 52 ರನ್ ಚಚ್ಚಿದರು. ಒಟ್ಟಾರೆ 140 ಎಸೆಗಳಲ್ಲಿ 14 ಬೌಂಡರಿ 5 ಸಿಕ್ಸರ್ ಸಹಿತ 152 ರನ್ ಸಿಡಿಸಿ ಔಟಾದರು.
ಪಡಿಕ್ಕಲ್ಗೆ ಸಾಥ್ ನೀಡಿದ ಆರ್. ಸಮರ್ಥ್ 60, ಸಿದ್ಧಾರ್ಥ್ ಕೆವಿ 41, ಕರುಣ್ ನಾಯರ್ 22 ಹಾಗೂ ಮಿಥುನ್ 17 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಸಹಿತ 40 ರನ್ ಸಿಡಿಸಿ 329 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಪಡಿಕ್ಕಲ್ ಉತ್ತರಪ್ರದೇಶದ ವಿರುದ್ಧ 52, ಬಿಹಾರ್ ವಿರುದ್ಧ 97 ಮತ್ತು ಈ ಪಂದ್ಯದಲ್ಲಿ 152 ರನ್ ಸಿಡಿಸಿದ್ದಾರೆ.
ಒಟ್ಟಾರೆ 3 ಪಂದ್ಯಗಳಲ್ಲಿ 302 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿದ್ದಾರೆ. ಕೇರಳ ಪರ ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ 3 ಪಂದ್ಯಗಳಿಂದ 2 ಶತಕ ಮತ್ತು ಒಂದು ಅರ್ಧಶತಕ ಸಹಿತ 288 ರನ್ ಗಳಿಸಿದ್ದಾರೆ.
ಇದನ್ನು ಓದಿ:100ನೇ ಟೆಸ್ಟ್ ಆಡುತ್ತಿರುವ ಇಶಾಂತ್ ಶರ್ಮಾಗೆ ರಾಷ್ಟ್ರಪತಿ, ಗೃಹಸಚಿವರಿಂದ ಗೌರವ