ETV Bharat / sports

ದೇವದತ್​ ಪಡಿಕ್ಕಲ್​ ಸ್ಫೋಟಕ ಶತಕ... ಕರ್ನಾಟಕ ತಂಡಕ್ಕೆ 5 ವಿಕೆಟ್​ಗಳ ಜಯ

author img

By

Published : Nov 11, 2019, 5:37 PM IST

ವಿಜಯ್​ ಹಜಾರೆ ಟ್ರೋಫಿಯಲ್ಲಿ ಗರಿಷ್ಟ ಸ್ಕೋರರ್​ ಆಗಿರುವ ಯುವ ಆಟಗಾರ ದೇವದತ್​ ಪಡಿಕ್ಕಲ್​ ಸಯ್ಯದ್​ ಮುಷ್ತಾಕ್​ ಅಲಿ ಟಿ-20 ಟೂರ್ನಿಯಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದು, ಆಂಧ್ರಪ್ರದೇಶದ ವಿರುದ್ಧ ಶತಕ ಸಿಡಿಸಿ ಕರ್ನಾಟಕಕ್ಕೆ 5 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದಾರೆ.

SYED MUSHTAQ ALI TROPHY 2019-20

ಕೋಲ್ಕತ್ತಾ: ಸಯ್ಯದ್​ ಮುಷ್ತಾಕ್​ ಅಲಿ ಟಿ-20 ಟೂರ್ನಿಯಲ್ಲಿ 19 ವರ್ಷದ ಯುವ ಆಟಗಾರ ದೇವದತ್​ ಪಡಿಕ್ಕಲ್​ ಆಂಧ್ರಪ್ರದೇಶದ ವಿರುದ್ಧ ಸ್ಫೋಟಕ ಶತಕ ಸಿಡಿಸಿ ಕರ್ನಾಟಕಕ್ಕೆ 5 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದಾರೆ.

ಮೊದಲು ಬ್ಯಾಟಿಂಗ್​ ನಡೆಸಿದ ಆಂಧ್ರಪ್ರದೇಶ ತಂಡ 5 ವಿಕೆಟ್​ ಕಳೆದುಕೊಂಡು 184 ರನ್​ಗಳಿಸಿತ್ತು. ಆರಂಭಿಕ ಅಶ್ವಿನ್​ ಹೆಬ್ಬಾರ್​ 61, ಪ್ರಶಾಂತ್​ ಕುಮಾರ್​ ದಾರ 79 ರನ್​ಗಳಿಸಿ ಬೃಹತ್​ ಮೊತ್ತಕ್ಕೆ ನೆರವಾದರು. ಕರ್ನಾಟಕ ಪರ ವಿ ಕೌಶಿಕ್​ 3 ವಿಕೆಟ್​, ಗೋಪಾಲ್​ ಹಾಗೂ ಮಿಥುನ್​ ತಲಾ ಒಂದು ವಿಕೆಟ್​ ಪಡೆದರು.

ಕೊಹ್ಲಿ ಮನಸ್ಸು ಮಾಡಿದ್ರೆ ಈತ RCBಗೆ ಅದ್ಭುತ ಓಪನರ್ ಆಗ್ತಾನೆ​!

185 ರನ್​ಗಳ ಟಾರ್ಗೆಟ್ ಪಡೆದ ಕರ್ನಾಟಕ ಕೇವಲ 7 ರನ್​ಗಳಾಗುವಷ್ಟರಲ್ಲಿ ಆರಂಭಿಕರಾದ ರೋಹನ್​ ಕದಮ್​(1) ಹಾಗೂ ಲುವನೀತ್​ ಸಿಸೋಡಿಯಾ(1) ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಈ ಸಂದರ್ಭದಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಕೆ ಗೌತಮ್​(35) ದೇವದತ್​ ಪಡಿಕ್ಕಲ್​(122) ಜೊತೆಗೂಡಿ 63 ರನ್​ ಸೇರಿಸಿ ತಂಡವನ್ನು ಆಘಾತದಿಂದ ಪಾರು ಮಾಡಿದರು.

ಇವರು ದೇಶಕ್ಕೆ ಮತ್ತೊಂದು ವಿಶ್ವಕಪ್‌ ತರುವ ಭರವಸೆ ಹುಟ್ಟಿಸಿದ ಟೀನೇಜ್​ ಕ್ರಿಕೆಟರ್ಸ್ .!​

17 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್​ ಸಿಡಿಸಿ 35 ರನ್​ಗಳಿಸಿದ್ದ ಗೌತಮ್​ ಔಟಾದರೆ, ನಂತರ ಬಂದ ಕರುಣ್​ 3 ರನ್​ಗಳಿಸಿ ರನ್​ಔಟ್​ ಆದರು. ಒಂದು ಕಡೆ ವಿಕೆಟ್​ ಬೀಳುತ್ತಿದ್ದರು ತನ್ನ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದ ಪಡಿಕ್ಕಲ್​, ಶ್ರೇಯಸ್​ ಗೋಪಾಲ್​ ಜೊತೆ ಸೇರಿ 5 ನೇ ವಿಕೆಟ್​ಗೆ 64 ರನ್​ ಸೇರಿಸಿದರು. ಇದರಲ್ಲಿ ಗೋಪಾಲ್​ ಕೊಡುಗೆ 11 ರನ್​ ಮಾತ್ರ. ಗೋಪಾಲ್​ ಔಟಾದ ನಂತರ ಪ್ರವೀಣ್​ ದುಬೆ(13) ಜೊತೆ ಸೇರಿದ ಪಡಿಕ್ಕಲ್​ ಮುರಿಯದ 6 ನೇ ವಿಕೆಟ್​ ಜೊತೆಯಾಟದಲ್ಲಿ 30 ರನ್​ ಸೇರಿಸಿ ತಂಡಕ್ಕೆ 5 ವಿಕೆಟ್​ಗಳ ಗೆಲುವು ತಂದುಕೊಟ್ಟರು.

48 ಎಸೆತಗಳಲ್ಲಿ ಶತಕ ಸಿಡಿಸಿದ ದೇವದತ್​ ಪಡಿಕ್ಕಲ್​ 60 ಎಸೆತಗಳಲ್ಲಿ 7 ಸಿಕ್ಸರ್​ ಹಾಗೂ 13 ಬೌಂಡರಿ ಸಹಿತ 122 ರನ್​ಗಳಿಸಿದರು.ಈ ಗೆಲುವಿನೊಂದಿಗೆ ಕರ್ನಾಟಕ ತಂಡ 3 ಪಂದ್ಯಗಳಲ್ಲಿ ಒಂದು ಸೋಲು 2 ಗೆಲುವಿನೊಂದಿಗೆ ಎ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.