ದುಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ಗೆ ಇನ್ನು ಕೇವಲ ತಿಂಗಳ ಅಂತರವಿರುವಾಗ ಆಸ್ಟ್ರೇಲಿಯಾ ಮಾಜಿ ಬೌಲರ್ ರಿಯಾನ್ ಹ್ಯಾರೀಸ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿರುವುದಾಗಿ ಡೆಲ್ಲಿ ಕ್ಯಾಪಿಟಲ್ ಘೋಷಣೆ ಮಾಡಿದೆ.
40 ವರ್ಷದ ರಿಯಾನ್ ಹ್ಯಾರೀಸ್ ಸೆಪ್ಟಂಬರ್ 19ರಿಂದ ಆರಂಭವಾಗುವ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ನ ನೂತನ ಬೌಲಿಂಗ್ ಕೋಚ್ ಆಗಿ ದುಬೈಗೆ ಹಾರಲಿದ್ದಾರೆ. 2018 ಮತ್ತು 2019ರಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಜೇಮ್ಸ್ ಹೋಪ್ ವೈಯಕ್ತಿಕ ಕಾರಣಗಳಿಂದ ಈ ಬಾರಿ ದುಬೈ ಪ್ರಯಾಣ ಬೆಳೆಸಲು ಸಾಧ್ಯವಾಗದ್ದರಿಂದ ಹ್ಯಾರೀಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪ್ರಾಂಚೈಸಿ ತಿಳಿಸಿದೆ.
-
📳 𝘈𝘭𝘦𝘳𝘵: 𝘈𝘥𝘥𝘪𝘵𝘪𝘰𝘯 𝘵𝘰 𝘤𝘰𝘢𝘤𝘩𝘪𝘯𝘨 𝘴𝘵𝘢𝘧𝘧 📳
— Delhi Capitals (Tweeting from 🇦🇪) (@DelhiCapitals) August 25, 2020 " class="align-text-top noRightClick twitterSection" data="
Former Australian fast bowler and IPL winner @r_harris413 has joined us as our new Bowling Coach for the #Dream11IPL 💪🏻
More details: https://t.co/TnLEY3z5F4#WelcomeRyan #YehHaiNayiDilli pic.twitter.com/Q7zOypef2p
">📳 𝘈𝘭𝘦𝘳𝘵: 𝘈𝘥𝘥𝘪𝘵𝘪𝘰𝘯 𝘵𝘰 𝘤𝘰𝘢𝘤𝘩𝘪𝘯𝘨 𝘴𝘵𝘢𝘧𝘧 📳
— Delhi Capitals (Tweeting from 🇦🇪) (@DelhiCapitals) August 25, 2020
Former Australian fast bowler and IPL winner @r_harris413 has joined us as our new Bowling Coach for the #Dream11IPL 💪🏻
More details: https://t.co/TnLEY3z5F4#WelcomeRyan #YehHaiNayiDilli pic.twitter.com/Q7zOypef2p📳 𝘈𝘭𝘦𝘳𝘵: 𝘈𝘥𝘥𝘪𝘵𝘪𝘰𝘯 𝘵𝘰 𝘤𝘰𝘢𝘤𝘩𝘪𝘯𝘨 𝘴𝘵𝘢𝘧𝘧 📳
— Delhi Capitals (Tweeting from 🇦🇪) (@DelhiCapitals) August 25, 2020
Former Australian fast bowler and IPL winner @r_harris413 has joined us as our new Bowling Coach for the #Dream11IPL 💪🏻
More details: https://t.co/TnLEY3z5F4#WelcomeRyan #YehHaiNayiDilli pic.twitter.com/Q7zOypef2p
ಐಪಿಎಲ್ಗೆ ಮರಳಲು ನನಗೆ ಸಂತಸವಾಗಿದೆ ಎಂದಿರುವ ಹ್ಯಾರೀಸ್, ಟ್ರೋಫಿ ಎತ್ತಿ ಹಿಡಿಯುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಾಂಚೈಸಿಗಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಡೆಲ್ಲಿ ಕ್ಯಾಪಿಟಲ್ ತಂಡವೂ ಪ್ರಭಾವಶಾಲಿ ಬೌಲಿಂಗ್ ಲೈನ್ಅಪ್ ಹೊಂದಿದೆ ಮತ್ತು ಅವರೆಲ್ಲರೊಂದಿಗೆ ಕೆಲಸ ಮಾಡುವುದಕ್ಕಾಗಿ ನಾನು ಕಾತರನಾಗಿದ್ದೇನೆ ಎಂದು ಮಾಜಿ ಆಸ್ಟ್ರೇಲಿಯನ್ ಬೌಲರ್ ತಿಳಿಸಿದ್ದಾರೆ.
2015ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ನಿವೃತ್ತಿ ಘೋಷಿಸಿರುವ ಹ್ಯಾರೀಸ್ ಟೆಸ್ಟ್ ಕ್ರಿಕೆಟ್ನಲ್ಲಿ 113 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 44 ವಿಕೆಟ್ ಹಾಗೂ ಟಿ-20ಯಲ್ಲಿ 4 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಈಗಾಗಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಗ್ ಮುಖ್ಯ ಕೋಚ್ ಆಗಿದ್ದಾರೆ. ಇವರ ಜೊತೆ ಭಾರತದ ಮೊಹಮ್ಮದ್ ಕೈಫ್ ಹಾಗೂ ವಿಜಯ್ ದಾಹಿಯಾ, ವಿಂಡೀಸ್ನ ಸ್ಯಾಮ್ಯುಯಲ್ ಬದ್ರಿ ಕೂಡ ಕೋಚಿಂಗ್ ಸ್ಟಾಫ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.