ETV Bharat / sports

ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​​

author img

By

Published : Nov 2, 2020, 7:03 PM IST

Updated : Nov 2, 2020, 7:11 PM IST

ನಿರ್ಣಾಯಕ ಪಂದ್ಯದಲ್ಲಿ ಇಂದು ಡೆಲ್ಲಿ-ಆರ್​ಸಿಬಿ ಮುಖಾಮುಖಿಯಾಗುತ್ತಿದ್ದು, ಜಯ ಸಾಧಿಸುವ ತಂಡ ಸುಲಭವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಲಿದೆ.

RCB vs Dehli match
RCB vs Dehli match

ದುಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಹತ್ವದ ಪಂದ್ಯದಲ್ಲಿ ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್​ ತಂಡಗಳು ಮುಖಾಮುಖಿಯಾಗಿದ್ದು, ಟಾಸ್​ ಗೆದ್ದ ಡೆಲ್ಲಿ ತಂಡ ಬೌಲಿಂಗ್​​ ಆಯ್ದುಕೊಂಡಿದೆ.

ಪ್ಲೇ-ಆಫ್​ ಹಾಗೂ ಐಪಿಎಲ್​ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಬೇಕಾದರೆ ಉಭಯ ತಂಡಗಳಿಗೆ ಇಂದಿನ ಪಂದ್ಯ ಬಹಳಷ್ಟು ಮಹತ್ವ ಪಡೆದುಕೊಂಡಿದ್ದು, ಡೆಲ್ಲಿ ಹಾಗೂ ಆರ್​ಸಿಬಿಗೆ ಇಂದಿನ ಪಂದ್ಯ 13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯವಾಗಿದೆ.

ಉಭಯ ತಂಡಗಳು ಇಲ್ಲಿಯವರೆಗೆ ಆಡಿರುವ 13 ಪಂದ್ಯಗಳ ಪೈಕಿ ತಲಾ 7ರಲ್ಲಿ ಗೆಲುವು ಸಾಧಿಸಿ, ಕ್ರಮವಾಗಿ 14 ಅಂಕ ಸಂಪಾದಿಸಿದ್ದು, ರನ್​ರೇಟ್​ ಆಧಾರದ ಮೇಲೆ ಆರ್​ಸಿಬಿ ಎರಡನೇ ಹಾಗೂ ಡೆಲ್ಲಿ ಮೂರನೇ ಸ್ಥಾನದಲ್ಲಿದೆ.

ಆಡುವ 11ರ ಬಳಗ ಇಂತಿದೆ

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು: ಜೋಶ್​ ಪಿಲಿಪ್ಪೆ, ದೇವದತ್​ ಪಡಿಕ್ಕಲ್​, ವಿರಾಟ್​ ಕೊಹ್ಲಿ(ಕ್ಯಾ), ಎಬಿ ಡಿವಿಲಿಯರ್ಸ್​​, ವಾಷಿಂಗ್ಟನ್​ ಸುಂದರ್​, ಶಿವಂ ದುಬೆ, ಶಹ್ಜಾದ್​ ಅಹ್ಮದ್, ಕ್ರಿಸ್ ಮೊರಿಸ್​, ಇರುಸ್​ ಉದಾನ್​, ಮೊಹಮ್ಮದ್​​ ಸಿರಾಜ್​, ಯಜುವೇಂದ್ರ ಚಹಾಲ್​

ಡೆಲ್ಲಿ ಕ್ಯಾಪಿಟಲ್ಸ್​​: ಶಿಖರ್​ ಧವನ್​​, ಪೃಥ್ವಿ ಶಾ, ರಹಾನೆ, ಶ್ರೇಯಸ್​ ಅಯ್ಯರ್​(ಕ್ಯಾ), ರಿಷಬ್​ ಪಂತ್​, ಮಾರ್ಕೂಸ್ ಸ್ಟೋನಿಸ್​, ಡಾನಿಲ್​ ಸ್ಯಾಮ್ಸ್​, ಅಕ್ಸರ್​ ಪಟೇಲ್​, ಆರ್​.ಅಶ್ವಿನ್, ಕಾಗಿಸೋ ರಬಾಡ, ಅನ್ರಿಕ್ ನಾರ್ಟ್ಜೆ

ಬೆಂಗಳೂರು ತಂಡದ ಆರಂಭಿಕ ಆಟಗಾರರ ಪಡಿಕ್ಕಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಫಿಲಿಪ್ಪೆ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಆದರೆ ವಿರಾಟ್ ಮತ್ತು ವಿಲಿಯರ್ಸ್ ನಿರ್ಗಮನದ ನಂತರ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟುವ ಆಟಗಾರರಿಲ್ಲ. ಇದರ ಜತೆಗೆ ಆರ್​ಸಿಬಿ ಬೌಲಿಂಗ್ ಪಡೆ ಕೂಡ ಡೆಲ್ಲಿಯಷ್ಟು ಉತ್ತಮವಾಗಿಲ್ಲ, ಮೋರಿಸ್ ಮತ್ತು ಚಹಾಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸೈನಿ, ಸಿರಾಜ್, ಸುಂದರ್ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.

ಟೂರ್ನಿ ಆರಂಭದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೆಲ್ಲಿ, ಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ - ಆಫ್​ ಹಂತಕ್ಕೇರಲು ಹೆಣಗಾಡುತ್ತಿದೆ.

Last Updated : Nov 2, 2020, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.