ETV Bharat / sports

ಇಂಗ್ಲೆಂಡ್ ಪ್ರತಿಷ್ಠಿತ​ ಟಿ-20 ಲೀಗ್​ನಲ್ಲಿ ಆಡಲಿದ್ದಾರೆ ಭಾರತೀಯ ಆಲ್​ರೌಂಡರ್​ ದೀಪ್ತಿ ಶರ್ಮಾ

21 ವರ್ಷದ ದೀಪ್ತಿ ಶರ್ಮಾ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕಿಯಾ ಸೂಪರ್​ ಲೀಗ್ ಟಿ-20 ಯಲ್ಲಿ​(KSL) ವೆಸ್ಟರ್ನ್​ ಸ್ಟಾರ್ಮ್​ ತಂಡದ ಪರ ಆಡಲಿದ್ದಾರೆ.

Deepti Sharma
author img

By

Published : Jun 29, 2019, 5:56 PM IST

ಮುಂಬೈ: ಭಾರತ ಮಹಿಳಾ ತಂಡದ ಆಲ್​ರೌಂಡರ್​ ದೀಪ್ತಿ ಶರ್ಮಾ ಕಿಯಾ ಸೂಪರ್​ ಲೀಗ್​ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದು, ಈ ಲೀಗ್​ನಲ್ಲಿ ಆಡಲಿರುವ ಭಾರತದ ನಾಲ್ಕನೇ ಕ್ರಿಕೆಟರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

21 ವರ್ಷದ ದೀಪ್ತಿ ಶರ್ಮಾ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕಿಯಾ ಸೂಪರ್​ ಲೀಗ್ ಟಿ-20 ಯಲ್ಲಿ​(KSL) ವೆಸ್ಟರ್ನ್​ ಸ್ಟಾರ್ಮ್​ ತಂಡದ ಪರ ಆಡಲಿದ್ದಾರೆ.

ಈಗಾಗಲೆ ಈ ಟೂರ್ನಿಗೆ ಭಾರತ ಟಿ -20 ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​, ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಕಿಯಾ ಸೂಪರ್​ ಲೀಗ್​ನಲ್ಲಿ ಆಡಿದ್ದರು. ಕಳೆದ ವರ್ಷದ ಲೀಗ್​ನಲ್ಲಿ ಮಂಧಾನ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್​ ಎನಿಸಿದ್ದರು.

ಕಳೆದ ವರ್ಷ ಮಂಧಾನ ವೆಸ್ಟರ್ನ್​ ಸ್ಟಾರ್ಮ್​ ತಂಡದ ಪರ ಹಾಗೂ ಕೌರ್​ ಲಾಂಕೆಶೈರ್​ ತಂಡಕ್ಕಾಗಿ ಆಡಿದ್ದರು. ಇವರಿಬ್ಬರ ನಂತರ ಯುವ ಆಟಗಾರ್ತಿ ಜಮೈಮಾ ರೋಡ್ರಿಗಾಸ್​ ಕೂಡ ಯಾರ್ಕ್​ಶೈರ್​ ಡೈಮಂಡ್​ ಪರ ಆಡಲು ಒಪ್ಪಂದಕ್ಕೆ ಸಹಿ ಮಾಡಿದ್ದರು. ಇದೀಗ ದೀಪ್ತಿ ಶರ್ಮಾ ನಾಲ್ಕನೇ ಭಾರತೀಯ ಆಟಗಾರ್ತಿಯಾಗಿ ಕೆಎಸ್​ಎಲ್​ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.