ETV Bharat / sports

7 ಸಿಕ್ಸರ್​​ ಸಹಿತ ಅರ್ಧಶತಕ... ದೀಪಕ್​ ಚಹಾರ್​ ಚಮತ್ಕಾರಕ್ಕೆ ಸೆಮೀಸ್​​ಗೆ ರಾಜಸ್ಥಾನ​ ತಂಡ ಲಗ್ಗೆ

author img

By

Published : Nov 28, 2019, 4:33 PM IST

ಧೋನಿ ನಾಯಕತ್ವದಲ್ಲಿ ಬೆಳಕಿಗೆ ಬಂದ ದೀಪಕ್​ ಚಹಾರ್​ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದು ಭಾರತಕ್ಕೆ ಸರಣಿ ಜಯ ತಂದುಕೊಟ್ಟಿದ್ದರು. ಮತ್ತೆ ಎರಡು ದಿನಗಳ ನಂತರ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ವಿದರ್ಭ ವಿರುದ್ಧ ಹ್ಯಾಟ್ರಿಕ್​ ಪಡೆದು ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಅವರು ಬ್ಯಾಟಿಂಗ್​ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

Deepak Chahar fifty
Deepak Chahar fifty

ಸೂರತ್​: ಸಯ್ಯದ್​ ಮುಷ್ತಾಕ್​ ಅಲಿ ಟಿ-20 ಟೂರ್ನಿಮೆಂಟ್​ನಲ್ಲಿ ರಾಜಸ್ಥಾನದ ನಾಯಕ ದೀಪಕ್​ ಚಹಾರ್​ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಮ್ಮ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದಿದ್ದಾರೆ.

ಧೋನಿ ನಾಯಕತ್ವದಲ್ಲಿ ಬೆಳಕಿಗೆ ಬಂದ ದೀಪಕ್​ ಚಹಾರ್​ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದು ಭಾರತಕ್ಕೆ ಸರಣಿ ಜಯ ತಂದುಕೊಟ್ಟಿದ್ದರು. ಮತ್ತೆ ಎರಡು ದಿನಗಳ ನಂತರ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ವಿದರ್ಭ ವಿರುದ್ಧ ಹ್ಯಾಟ್ರಿಕ್​ ಪಡೆದು ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು.

ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಆದರೆ ಬೌಲಿಂಗ್​ನಿಂದಲ್ಲ, ಬದಲಾಗಿ ಬ್ಯಾಟಿಂಗ್​ ಪ್ರದರ್ಶನದಿಂದ. ತಾವು ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಕ್ಕೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ.

ಬುಧವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 50 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​​ಗೆ ಇಳಿದ ದೀಪಕ್​ ಚಹಾರ್, 42 ಎಸೆತಗಳಲ್ಲಿ 7 ಸಿಕ್ಸರ್​ ಸಹಿತ 55 ರನ್ ​ಗಳಿಸಿ ಔಟಾಗದೆ ಉಳಿದರು. ಇವರ ಬ್ಯಾಟಿಂಗ್​ ನೆರವಿನಿಂದ 134 ರನ್​ಗಳ ಟಾರ್ಗೆಟ್​ ನೀಡಿಯೂ ರಾಜಸ್ಥಾನ 2 ರನ್​ಗಳ ಜಯ ಸಾಧಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ಈಗಾಗಲೇ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ದೀಪಕ್​ ಚಹಾರ್​ಗೆ ಬ್ಯಾಟಿಂಗ್​ನಲ್ಲಿ ಅವಕಾಶ ಕಲ್ಪಿಸಿಕೊಟ್ಟರೆ ಭಾರತ ತಂಡದಲ್ಲಿ ಖಾಲಿ ಇರುವ ಆಲ್​ರೌಂಡರ್​ ಸ್ಥಾನಕ್ಕೆ ಸೂಕ್ತವಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.