ಜೋಹಾನ್ಸ್ಬರ್ಗ್: ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಡೀನ್ ಎಲ್ಗರ್ ಅವರನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ಹಾಗೂ ಟೆಂಬಾ ಬವುಮಾರನ್ನು ಏಕದಿನ ಮತ್ತು ಟಿ20 ತಂಡಗಳಿಗೆ ನಾಯಕರನ್ನಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.
ಬವುಮಾ ದಕ್ಷಿಣ ಆಫ್ರಿಕಾ ತಂಡವನ್ನು 2021 ಮತ್ತು 2022ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಜೊತೆಗೆ 2023ರ ಏಕದಿನ ವಿಶ್ವಕಪ್ನಲ್ಲಿ ಮುನ್ನಡೆಸಲಿದ್ದಾರೆ. ಡೀನ್ ಎಲ್ಗರ್ ಮುಂದಿನ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತಂಡದ ನೇತೃತ್ವವನ್ನು ವಹಿಸಲಿದ್ದಾರೆ ಎಂದು ದಕ್ಷಿಣ ಅಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಣೆ ಹೊರಡಿಸಿದೆ.
-
South Africa have named Dean Elgar as their new Test captain while Temba Bavuma will lead the side in ODIs and T20Is 🇿🇦 pic.twitter.com/GnwVJ3GQD5
— ICC (@ICC) March 4, 2021 " class="align-text-top noRightClick twitterSection" data="
">South Africa have named Dean Elgar as their new Test captain while Temba Bavuma will lead the side in ODIs and T20Is 🇿🇦 pic.twitter.com/GnwVJ3GQD5
— ICC (@ICC) March 4, 2021South Africa have named Dean Elgar as their new Test captain while Temba Bavuma will lead the side in ODIs and T20Is 🇿🇦 pic.twitter.com/GnwVJ3GQD5
— ICC (@ICC) March 4, 2021
ಎಲ್ಗರ್ ದೀರ್ಘ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಕ್ರಿಕೆಟಿಗರ, ಕ್ವಿಂಟನ್ ಡಿ ಕಾಕ್ ಈ ಮೊದಲೇ ತಮಗೆ ಟೆಸ್ಟ್ ನಾಯಕತ್ವ ಹೊರೆಯಾಗಲಿದೆ ಎಂದು ತಿಳಿಸಿದ್ದರು. ಹಾಗಾಗಿ ಪಾಕಿಸ್ತಾನ ಸರಣಿ ಮುಗಿಯುತ್ತಿದ್ದಂತೆ ಎಲ್ಗರ್ಗೆ ಹರಿಣಪಡೆಯ ನಾಯಕತ್ವನ್ನು ನೀಡಲಾಗಿದೆ. ಆದರೂ ಡಿಕಾಕ್ ತಂಡದ ನಾಯಕತ್ವ ವಿಭಾಗದಲ್ಲಿ ಇರುತ್ತಾರೆ ಎಂದು ಸಿಎಸ್ಎ ಡೈರೆಕ್ಟರ್ ಗ್ರೇಮ್ ಸ್ಮಿತ್ ತಿಳಿಸಿದ್ದಾರೆ.
ಇನ್ನು ಟೆಂಬಾ ಬವುಮಾ ಮೂರು ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಪ್ರಮುಖ ಭಾಗವಾಗಿದ್ದಾರೆ. ಜೊತೆಗೆ ಉತ್ತಮ ನಾಯಕತ್ವ ಗುಣವನ್ನು ಹೊಂದಿದ್ದಾರೆ. ಅಲ್ಲದೆ ಕೋಚ್ ಮತ್ತು ತಂಡದ ಆಟಗಾರರ ಬೆಂಬಲವನ್ನು ಹೊಂದಿರುವುದರಿಂದ ಮುಂದಿನ 3 ವರ್ಷಗಳಲ್ಲಿ ಆಯೋಜನೆಯಾಗಲಿರುವ ಐಸಿಸಿ ಟ್ರೋಫಿಗಳವರೆಗೂ ಅವರನ್ನು ನಾಯಕನಾಗಿ ಉಳಿಸಲು ಸಿಎಸ್ಎ ನಿರ್ಧರಿಸಿದೆ.