ಹೈದರಾಬಾದ್: ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳೆಗೆ ಎಬಿ ಡಿವಿಲಿಯರ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ತಂಡದ ತರಬೇತುದಾರ ಮಾರ್ಕ್ ಬೌಚರ್ ಹೇಳಿದ್ದಾರೆ.
-
Will we see AB de Villiers at the Men's @T20WorldCup 2020 later this year?
— ICC (@ICC) February 17, 2020 " class="align-text-top noRightClick twitterSection" data="
South Africa coach Mark Boucher had something interesting things to say on that 👇 https://t.co/aCWrnSkWG3
">Will we see AB de Villiers at the Men's @T20WorldCup 2020 later this year?
— ICC (@ICC) February 17, 2020
South Africa coach Mark Boucher had something interesting things to say on that 👇 https://t.co/aCWrnSkWG3Will we see AB de Villiers at the Men's @T20WorldCup 2020 later this year?
— ICC (@ICC) February 17, 2020
South Africa coach Mark Boucher had something interesting things to say on that 👇 https://t.co/aCWrnSkWG3
ಡಿವಿಲಿಯರ್ಸ್ ಅವರು ಮೇ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಅಂದಿನಿಂದ, ಅವರು ತಂಡಕ್ಕೆ ಮರಳುವ ಬಗ್ಗೆ ಮಾತು ಕೇಳಿಬರುತ್ತಿದ್ದವು.
ನಾನು ಎಬಿಡಿ ಜೊತೆ ಮಾತನಾಡಿದ್ದು, ಈ ಬಗ್ಗೆ ಸದ್ಯದಲ್ಲೆ ತಿಳಿಸುತ್ತೇನೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದ ನಾನು ಹೇಳಿದಂತೆ, ನಾವು ವಿಶ್ವಪ್ ಟೂರ್ನಿಗೆ ಹೊರಟರೆ ಆ ತಂಡದಲ್ಲಿ ಅತ್ಯುತ್ತಮ ಆಟಗಾರರು ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಎಬಿ ಡಿ ವಿಲಿಯರ್ಸ್ ಇಂದು 36ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಮಾರ್ ಬೌಚರ್ ನೀಡಿದ ಈ ಸುದ್ದಿ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.