ETV Bharat / sports

ರೋಹಿತ್ ಶರ್ಮಾ ಲಯ ಕಳೆದುಕೊಂಡಿರುವುದನ್ನ ಡೆಲ್ಲಿ ತಂಡ ಸದುಪಯೋಗಪಡಿಸಿಕೊಳ್ಳಲಿದೆ: ಧವನ್​

ಭಾರತ ತಂಡದ ಪರ ರೋಹಿತ್ ಜೊತೆಯಾಗಿ ಆಡುವ ಗಬ್ಬರ್​ ಖ್ಯಾತಿಯ ಧವನ್ ರೋಹಿತ್ ಬ್ಯಾಟಿಂಗ್​ ಟಚ್​ನಲ್ಲಿಲ್ಲದ್ದನ್ನ ಡೆಲ್ಲಿ ತಂಡಕ್ಕೆ ಸದುಪಯೋಗಪಡಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಗುರುವಾರ ಡೆಲ್ಲಿ ಹಾಗೂ ಮುಂಬೈ ತಂಡಗಳು ಮೊದಲ ಕ್ವಾಲಿಫೈಯರ್​ನಲ್ಲಿ ಕಾದಾಡಲಿವೆ.

ಶಿಖರ್ ಧವನ್​
ಶಿಖರ್ ಧವನ್​
author img

By

Published : Nov 4, 2020, 11:07 PM IST

Updated : Nov 4, 2020, 11:13 PM IST

ದುಬೈ: ಗಾಯದಿಂದ ಚೇತಿಸಿಕೊಂಡಿದ್ದರೂ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಫಾರ್ಮ್​ ಕಳೆದುಕೊಂಡಿರುವುದರಿಂದ ಡೆಲ್ಲಿ ತಂಡಕ್ಕೆ ದೊಡ್ಡ ಅನುಕೂಲವಾಗಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್ ಹೇಳಿದ್ದಾರೆ.

ಭಾರತ ತಂಡದ ಪರ ರೋಹಿತ್ ಜೊತೆಯಾಗಿ ಆಡುವ ಗಬ್ಬರ್​ ಖ್ಯಾತಿಯ ಧವನ್ ರೋಹಿತ್ ಬ್ಯಾಟಿಂಗ್​ ಟಚ್​ನಲ್ಲಿಲ್ಲದ್ದನ್ನ ಡೆಲ್ಲಿ ತಂಡಕ್ಕೆ ಸದುಪಯೋಗಪಡಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಗುರುವಾರ ಡೆಲ್ಲಿ ಹಾಗೂ ಮುಂಬೈ ತಂಡಗಳು ಮೊದಲ ಕ್ವಾಲಿಫೈಯರ್​ನಲ್ಲಿ ಕಾದಾಡಲಿವೆ.

" ರೋಹಿತ್ ಒಬ್ಬ ಒಳ್ಳೆಯ ಆಟಗಾರ. ಅವರು ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರಿಂದ ಬ್ಯಾಟಿಂಗ್ ಟಚ್​ ಕಳೆದುಕೊಂಡಿದ್ದಾರೆ ಎಂದು ನನಗನ್ನಿಸುತ್ತಿದೆ. ಯಾವುದೇ ಆಟಗಾರ ಗಾಯದಿಂದ ಚೇತರಿಸಿಕೊಂಡು ಮರಳಿದ ವೇಳೆ ಒತ್ತಡ ಇದ್ದೇ ಇರುತ್ತದೆ. ಇದರ ಲಾಭವನ್ನು ಪಡೆಯಲು ನಾವು ಎದುರು ನೋಡುತ್ತಿದ್ದೇವೆ ಎಂದು ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್​ ಆಗಿರುವ ಧವನ್​ ಕ್ವಾಲಿಫೈರ್​ ಪಂದ್ಯಕ್ಕೂ ಮುನ್ನ ನಡೆದ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಂಬೈ ತಂಡದ ನಾಯಕ ಮಂಡಿರಜ್ಜು ಗಾಯಕ್ಕೊಳಗಾಗಿ 4 ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದರು. ಈ ವೇಳೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಘೋಷಿಸಿದ ತಂಡಕ್ಕೂ ಆಯ್ಕೆಯಾಗಿರಲಿಲ್ಲ. ಮತ್ತೆ ಕೊನೆಯ ಲೀಗ್ ಪಂದ್ಯದ ವೇಳೆ ಮುಂಬೈ ತಂಡಕ್ಕೆ ಮರಳಿದ್ದರು. ಆದರೆ ಕೇವಲ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಇದೇ ಸಂದರ್ಭದಲ್ಲಿ ಮುಂಬೈ ಬೌಲಿಂಗ್​ ದಾಳಿಯ ಬಗ್ಗೆಯೂ ಮಾತನಾಡಿದ್ದು, ಮುಂಬೈ ವಿರುದ್ಧದ ಪಂದ್ಯಕ್ಕಾಗಿ ನಾನು ಫ್ರೆಶ್​ ಆಗಿದ್ದೇನೆ. ಅವರ ಬೌಲರ್​ಗಳನ್ನ ಸಾಕಷ್ಟು ಬಾರಿ ನೋಡಿದ್ದೇನೆ. ಅವರನ್ನು ಎದುರಿಸುವುದಕ್ಕಾಗಿ ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದು, ನಮ್ಮ ತಂಡಕ್ಕೆ ಗೆಲುವು ತಂದುಕೊಡಲು ನಾನು ಸಿದ್ಧನಾಗಿದ್ದೇನೆ ಎಂದು ಧವನ್​ ಹೇಳಿದ್ದಾರೆ.

Last Updated : Nov 4, 2020, 11:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.