ETV Bharat / sports

14ನೇ ಐಪಿಎಲ್​ಗೆ ಹೊಸ ಜರ್ಸಿ ಬಿಡುಗಡೆಗೊಳಿಸಿದ ಸಿಎಸ್​ಕೆ,ಡೆಲ್ಲಿ ಕ್ಯಾಪಿಟಲ್ಸ್​! - ಚೆನ್ನೈ ಸೂಪರ್ ಕಿಂಗ್ಸ್​

ಸಶಸ್ತ್ರ ಪಡೆಗಳ ಮಹತ್ವ ಮತ್ತು ಅವರ ನಿಸ್ವಾರ್ಥ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಜರ್ಸಿಯ ಭುಜದಲ್ಲಿ ಸೇನೆಯ ಸಮವಸ್ತ್ರದ ಲೋಗೋವನ್ನು ಮುದ್ರಿಸಲಾಗಿದೆ..

14ನೇ ಐಪಿಎಲ್
14ನೇ ಐಪಿಎಲ್
author img

By

Published : Mar 24, 2021, 9:42 PM IST

ಮುಂಬೈ : 2020ರ ಐಪಿಎಲ್​ನ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು 3 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ 2021ರ ಆವೃತ್ತಿಗೂ ಮುನ್ನ ತಮ್ಮ ಜರ್ಸಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ನೂತನ ಜರ್ಸಿಗಳನ್ನು ಬುಧವಾರ ಬಿಡುಗಡೆ ಮಾಡಿವೆ.

ಡೆಲ್ಲಿ ಕ್ಯಾಪಿಟಲ್ಸ್​ ಈ ಬಾರಿಯೂ ನೀಲಿ ಮತ್ತು ಕೆಂಪು ಬಣ್ಣವನ್ನ ಜರ್ಸಿಯಲ್ಲಿ ಹೆಚ್ಚು ಬಳಸಿದೆ. ಡಾರ್ಕ್​ ಶೇಡ್​ ಹೊಂದಿರುವ ನೀಲಿ ಬಣ್ಣದ ಜರ್ಸಿ ಜೆಎಸ್​ಡಬ್ಲ್ಯೂ ಹಿಂದೆ ಮೂರು ಹುಲಿಗಳ ಚಿತ್ರಗಳನ್ನು ಹೊಂದಿದೆ. ಹಿಂದಿನ ಆವೃತ್ತಿಯ ಜರ್ಸಿಗಿಂತಲೂ ಬಾರಿ ಕೆಂಪುಬಣ್ಣವನ್ನು ಹೆಚ್ಚಾಗಿ ಬಳಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್​ ನೂತನ ಜರ್ಸಿಯ ಕೆಲವು ವಿಡಿಯೋಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಇನ್ನು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ನೂತನ ಜರ್ಸಿಯನ್ನು ಅನಾವರಣಗೊಳಿಸಿದ್ದಾರೆ. ಈ ಬಾರಿ ಭಾರತೀಯ ಸೈನ್ಯಕ್ಕೆ ಗೌರವ ತಂದುಕೊಡುವ ಭುಜದಲ್ಲಿ ಸೇನೆಯ ಸಮವಸ್ತ್ರದ ಬಣ್ಣದಿಂದ ಕೂಡಿದ ವಿನ್ಯಾಸ ಹೊಂದಿದೆ. ಸ್ವತಃ ಧೋನಿ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವುದರಿಂದ ಫ್ರಾಂಚೈಸಿ ಈ ಬಾರಿ ವಿಶೇಷ ಜರ್ಸಿ ಬಳಸಲಿದೆ.

"ಸಶಸ್ತ್ರ ಪಡೆಗಳ ಮಹತ್ವ ಮತ್ತು ಅವರ ನಿಸ್ವಾರ್ಥ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಲುವಾಗಿ ಜರ್ಸಿಯ ಭುಜದಲ್ಲಿ ಸೇನೆಯ ಸಮವಸ್ತ್ರದ ಲೋಗೋವನ್ನು ಮುದ್ರಿಸಲಾಗಿದೆ" ಎಂದು ​ಸಿಎಸ್‌ಕೆ ಸಿಇಒ ಕೆ ಎಸ್ ವಿಶ್ವನಾಥನ್ ಹೇಳಿದರು.

ಅಲ್ಲದೆ ಜರ್ಸಿಯಲ್ಲಿ ಮೂರು ಸ್ಟಾರ್​ಗಳಿವೆ. ಅದು ಮೂರು ಐಪಿಎಲ್ ಟ್ರೋಫಿಗಳನ್ನು​ ಗೆದ್ದಿರುವುದನ್ನು ಸೂಚಿಸುತ್ತಿದೆ. ಜೊತೆಗೆ ಈ ಬಾರಿ ಸ್ಪಾನ್ಸರ್ ಆಗಿರುವ ಮಿಂತ್ರಾದ ಲೋಗೊ ಕೂಡ ಜರ್ಸಿಯ ಮುಂಭಾಗದಲ್ಲಿ ಮುದ್ರಿತವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಏಪ್ರಿಲ್ 10ರಂದು 2021ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.