ಬರ್ಮಿಂಗ್ಹ್ಯಾಮ್: ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿದ ಮೇಲೆ ಡೇವಿಡ್ ವಾರ್ನರ್ ಹಾಗೂ ಸ್ಟಿವ್ ಸ್ಮಿತ್ ಒಂದು ವರ್ಷ ನಿಷೇಧದ ಶಿಕ್ಷೆ ಎದುರಿಸಿ ಮತ್ತೆ ಕ್ರಿಕೆಟ್ಗೆ ಪುನಾರಾಗಮನ ಮಾಡಿದ್ದಾರೆ. ಇವರಿಬ್ಬರಿಗೆ ಎಲ್ಲಾ ದೇಶಗಳ ಅಭಿಮಾನಿಗಳು ಗೌರವ ನೀಡುತ್ತಿದ್ದರೂ ಆಂಗ್ಲ ಅಭಿಮಾನಿಗಳು ಮಾತ್ರ ಅವರನ್ನು ಹಿಯಾಳಿಸುವುದನ್ನು ಬಿಟ್ಟಿಲ್ಲ.
ವಿಶ್ವಕಪ್ ವೇಳೆ ಸ್ಮಿತ್ ಹಾಗೂ ವಾರ್ನರ್ರನ್ನು ಚೀಟರ್ಸ್ ಎಂದು ಕೂಗಿ ಅವಮಾನಿಸಿದ್ದ ಇಂಗ್ಲೆಂಡ್ ಅಭಿಮಾನಿಗಳು ಆ್ಯಶಸ್ ಟೆಸ್ಟ್ ಸರಣಿ ವೇಳೆಯೂ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಮೊದಲ ದಿನ ವಾರ್ನರ್ ಹಾಗೂ ಬ್ಯಾನ್ಕ್ರಾಫ್ಟ್ ಬ್ಯಾಟಿಂಗ್ ಬರುವ ವೇಳೆ ಸ್ಯಾಂಡ್ ಪೇಪರ್ ತೋರಿಸಿ ಅವರನ್ನು ಬರಮಾಡಿಕೊಂಡಿದ್ದ ಇಂಗ್ಲಿಷ್ ಅಭಿಮಾನಿಗಳು, ನಿನ್ನೆ ವಾರ್ನರ್ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಸ್ಯಾಂಡ್, ಆತ ಕೈಯಲ್ಲಿ ಸ್ಯಾಂಡ್ ಪೇಪರ್ ಹಿಡಿದಿದ್ದಾನೆ ಎಂದು ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರು ಕಿರುಚಿದ್ದರು.
-
A smiling David Warner laughed along with the Edgbaston crowd as the first #Ashes Test maintain its good-natured spirit, writes @ARamseyCricket: https://t.co/Gi4wdqg83L pic.twitter.com/kwGZVD7Zt5
— cricket.com.au (@cricketcomau) August 3, 2019 " class="align-text-top noRightClick twitterSection" data="
">A smiling David Warner laughed along with the Edgbaston crowd as the first #Ashes Test maintain its good-natured spirit, writes @ARamseyCricket: https://t.co/Gi4wdqg83L pic.twitter.com/kwGZVD7Zt5
— cricket.com.au (@cricketcomau) August 3, 2019A smiling David Warner laughed along with the Edgbaston crowd as the first #Ashes Test maintain its good-natured spirit, writes @ARamseyCricket: https://t.co/Gi4wdqg83L pic.twitter.com/kwGZVD7Zt5
— cricket.com.au (@cricketcomau) August 3, 2019
ಇದಕ್ಕೆ ತಾಳ್ಮೆ ಕಳೆದುಕೊಳ್ಳದ ವಾರ್ನರ್ ನಗುಮುಖದೊಂದಿದೆ ಎರಡು ಕೈಗಳಿಂದ ತಮ್ಮ ಪ್ಯಾಂಟ್ ಜೇಬನ್ನು ತೋರಿಸಿ ಸುಮ್ಮನಾಗಿದ್ದರು. ಇನ್ನು ಸ್ಮಿತ್ ಮಾತ್ರ ಆಂಗ್ಲರ ಕಿರುಚಾಟಕ್ಕೆ ಜಗ್ಗದೆ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 144 ಹಾಗೂ ಎರಡನೇ ಇನ್ನಿಂಗ್ಸ್ನಲ್ಲೂ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ.
ಒಂದು ವರ್ಷ ಕ್ರಿಕೆಟ್ನಿಂದ ನಿಷೇಧ ಎದುರಿಸಿ ಶಿಕ್ಷೆಯನ್ನು ಅನುಭವಿಸಿದರೂ ಅವರನ್ನು ಪದೇ ಪದೇ ಚೀಟರ್ಸ್ ಎಂದು ಕೂಗಿ ಅವಮಾನಿಸುತ್ತಿರುವ ಇಂಗ್ಲೆಂಡ್ ಅಭಿಮಾನಿಗಳ ವರ್ತನೆ ಟೀಕೆಗೆ ಗುರಿಯಾಗಿದೆ.
-
He's done it again. What more can you say?
— cricket.com.au (@cricketcomau) August 4, 2019 " class="align-text-top noRightClick twitterSection" data="
Test 💯 No.25 for Steven Peter Devereux Smith #Ashes pic.twitter.com/EV8A8oDoRq
">He's done it again. What more can you say?
— cricket.com.au (@cricketcomau) August 4, 2019
Test 💯 No.25 for Steven Peter Devereux Smith #Ashes pic.twitter.com/EV8A8oDoRqHe's done it again. What more can you say?
— cricket.com.au (@cricketcomau) August 4, 2019
Test 💯 No.25 for Steven Peter Devereux Smith #Ashes pic.twitter.com/EV8A8oDoRq