ETV Bharat / sports

ಸನ್‌ರೈಸರ್ಸ್​ ನಾಯಕತ್ವದಲ್ಲಿ ಬದಲಾವಣೆ:​ ಆರೆಂಜ್ ಆರ್ಮಿ ಸಾರಥ್ಯ ಮತ್ತೆ ವಾರ್ನರ್​ ಹೆಗಲಿಗೆ - ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್

ಇಂಡಿಯನ್ ಪ್ರೀಮಿಯರ್​ ಲೀಗ್​ (ಐಪಿಎಲ್‌)ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆಸೀಸ್ ತಂಡದ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

David Warner to lead Sunrisers Hyderabad,ಆರೆಂಜ್ ಆರ್ಮಿ ಸಾರಥ್ಯ ವಾರ್ನರ್​ ಹೆಗಲಿಗೆ
ಆರೆಂಜ್ ಆರ್ಮಿ ಸಾರಥ್ಯ ವಾರ್ನರ್​ ಹೆಗಲಿಗೆ
author img

By

Published : Feb 27, 2020, 3:26 PM IST

ಹೈದರಾಬಾದ್: 2020ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

ಈ ವಿಚಾರವನ್ನು ಸನ್‌ರೈಸರ್ಸ್ ಹೈದ್ರಾಬಾದ್ ತಂಡ ಇಂದು ಟ್ವಿಟರ್ ಮೂಲಕ ತಿಳಿಸಿದೆ. ವಾರ್ನರ್ ಇರುವ ವಿ ಡಿಯೋ ಪೋಸ್ಟ್ ಮಾಡಿದ್ದು, ಇವರೇ ಆರೆಂಜ್ ಆರ್ಮಿಯ ನಾಯಕ ಎಂದು ಪ್ರಕಟಿಸಿದೆ.

ವಿಡಿಯೋದಲ್ಲಿ ಮಾತನಾಡಿರುವ ವಾರ್ನರ್, 2020ರ ಐಪಿಎಲ್​ನಲ್ಲಿ ಹೈದರಾಬಾದ್ ತಂಡದ ನಾಯಕನಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇಂಥ ಅವಕಾಶ ನೀಡಿದ ತಂಡಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಕಳೆದ ವರ್ಷ ನಾಯಕತ್ವ ವಹಿಸಿದ್ದ ಭುವನೇಶ್ವರ್ ಕುಮಾರ್ ಹಾಗೂ ಕೇನ್ ವಿಲಿಯಮ್ಸನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಇಬ್ಬರೂ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ಐಪಿಎಲ್​ ಕಿರೀಟ ಗೆಲ್ಲಲು ಸರ್ವ ರೀತಿಯ ಪ್ರಯತ್ನ ಮಾಡುವುದಾಗಿ ಡೇವಿಡ್ ವಾರ್ನರ್ ಹೇಳಿದ್ದಾರೆ. 2016 ರಲ್ಲಿ ತಂಡ ಮುನ್ನಡೆಸಿದ್ದ ವಾರ್ನರ್​ ಟ್ರೋಫಿ ಗೆದ್ದುಕೊಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.