ನವದೆಹಲಿ: ಆಸ್ಟ್ರೇಲಿಯಾ ತಂಡದ ಓಪನರ್ ಡೇವಿಡ್ ವಾರ್ನರ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿ ಹೇಗೆ ರಂಜಿಸುತ್ತಾರೋ ಅದೇ ರೀತಿ ಮೈದಾನದ ಹೊರೆಗೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಸದಾ ಇನ್ಸ್ಟಾಗ್ರಾಮ್ನಲ್ಲಿ ಚಟುವಟಿಕೆಯಿಂದಿರುವ ಅವರು, ಟಾಲಿವುಡ್, ಬಾಲಿವುಡ್ ಚಿತ್ರಗಳ ಗೀತೆಗಳಿಗೆ ನೃತ್ಯ ಮಾಡುವುದು, ಡೈಲಾಗ್ಗಳನ್ನು ಅನುಕರಣೆ ಮಾಡುವುದು, ಕೆಲವು ಸಿನಿಮಾ ದೃಶ್ಯಗಳನ್ನು ಎಡಿಟ್ ಮಾಡಿ ತಮ್ಮ ಫೋಟೋ ಸೇರಿಸಿ ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
- " class="align-text-top noRightClick twitterSection" data="
">
ಈ ಹಿಂದೆ ಪ್ರಭಾಸ್, ಅಲ್ಲು ಅರ್ಜುನ್, ಹೃತಿಕ್ ರೋಷನ್ ಅವರಂತೆ ನಟಿಸಿ ಭಾರತೀಯರ ಮೆಚ್ಚುಗೆ ಪಡೆದಿದ್ದ ಅವರು, ಇದೀಗ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರವಾಗಿರುವ ಯಶ್ ಅಭಿನಯದ ಕೆಜಿಎಫ್-2 ಟೀಸರ್ನಲ್ಲಿ ಯಶ್ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯವನ್ನು ರೀಪೇಜ್ ಆ್ಯಪ್ ಮೂಲಕ ಎಡಿಟ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
"ತಮ್ಮ ಅಭಿಮಾನಿಗಳು ಈ ದೃಶ್ಯವನ್ನು ಕಳುಹಿಸಿದ್ದರು, ನಾನು ಕೂಡ ಅವರಿಗೆ ಶೇರ್ ಮಾಡುವುದಾಗಿ ಮಾತು ಕೊಟ್ಟಿದ್ದೆ" ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ದೃಶ್ಯವನ್ನು ಕೇವಲ 4 ತಾಸುಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸುಮಾರು 16 ಸಾವಿರ ಮಂದಿ ವಾರ್ನರ್ ಅಭಿನಯಕ್ಕೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.