ನವದೆಹಲಿ : ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಮಾಲಿಂಗ, ಪೊಲಾರ್ಡ್, ಶೇನ್ ವಾಟ್ಸನ್ ಹಾಗೂ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ.
ಕಾಮೆಂಟೇಟರ್ ಹರ್ಷಬೋಗ್ಲೆಯವರೊಂದಿಗೆ ನಡೆದ ಸಂದರ್ಶನದಲ್ಲಿ ತಮಗೆ ನೆಚ್ಚಿನ ತಂಡವನ್ನು ಘೋಷಿಸಿದ್ದಾರೆ. ತಂಡದ ಆರಂಭಿಕರಾಗಿ ತಮ್ಮ ಜೊತೆಗೆ ರೋಹಿತ್ರನ್ನು ಆಯ್ಕೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 4ನೇ ಕ್ರಮಾಂದಲ್ಲಿ ಸಿಎಸ್ಕೆ ತಂಡದ ಸುರೇಶ್ ರೈನಾ, ನಂಬರ್5 ಮತ್ತು 6ನೇ ಸ್ಥಾನಕ್ಕೆ ಮ್ಯಾಕ್ಸ್ವೆಲ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. 7ನೇ ಕ್ರಮಾಂಕ ಹಾಗೂ ವಿಕೆಟ್ ಕೀಪರ್ ಜಾಗಕ್ಕೆ ಸಿಎಸ್ಕೆ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ವಾರ್ನರ್ ಸೆಲೆಕ್ಟ್ ಮಾಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್ ಸ್ಟಾರ್ಕ್, ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾರನ್ನು 8 ಮತ್ತು 9ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. 10ನೇ ಕ್ರಮಾಂಕದಲ್ಲಿ ಅನುಭವಿ ಆಶಿಷ್ ನೆಹ್ರಾರನ್ನು ಹಾಗೂ 11ನೇ ಸ್ಥಾನಕ್ಕೆ ಕುಲ್ದೀಪ್ ಅಥವಾ ಯಜುವೇಂದ್ರ ಚಾಹಲ್ರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ. ಸನ್ರೈಸರ್ಸ್ ತಂಡದ ನಾಯಕರಾಗಿರುವ ವಾರ್ನರ್ 126 ಪಂದ್ಯಗಳಲ್ಲಿ 4,706 ರನ್ಗಳಿಸಿದ್ದಾರೆ. 44 ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ. ಇವರ ನೇತೃತ್ವದಲ್ಲಿ ಸನ್ರೈಸರ್ಸ್ ತಂಡ 2016ರಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು.