ಹೈದರಾಬಾದ್:ಡೇವಿಡ್ ವಾರ್ನರ್ ಕಳೆದ ಸೀಸನ್ನಲ್ಲಿ ನಮ್ಮಿಂದ ದೂರವಿದ್ದರು. ಆದರೆ, ಪ್ರತಿ ಪಂದ್ಯದಲ್ಲೂ ನಮ್ಮ ಸೋಲು ಗೆಲುವಿನಲ್ಲಿ ಅವರದು ಪ್ರಮುಖ ಪಾತ್ರವಿರುತ್ತಿತ್ತು ಅಂತಾ ಹೈದರಾಬಾದ್ ಸನ್‌ರೈಸರ್ಸ್ ತಂಡದ ದಾಂಡಿಗ ಯೂಸುಫ್ ಪಠಾಣ್ ಹೇಳಿದ್ದಾರೆ.
ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಕಳೆದ ಐಪಿಎಲ್ ಆವೃತ್ತಿನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಡೇವಿಡ್ ವಾರ್ನರ್, ಆಸ್ಟ್ರೇಲಿಯಾದಲ್ಲಿದ್ದರೂ ಸನ್‌ರೈಸರ್ಸ್ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ತಂಡ ಸೋತರು, ಗೆದ್ದರೂ ಯಾವಾಗಲೂ ಆಟಗಾರರನ್ನು ಪ್ರೇರೇಪಿಸುತ್ತಿದ್ದರು. ಇದೇ ಕಾರಣದಿಂದ ನಮಗೆ ಅವರು ನಮ್ಮ ಜೊತೆಯಲ್ಲಿ ಇಲ್ಲ ಎಂಬ ಭಾವನೆ ಬರಲೇ ಇಲ್ಲ. ಜೊತೆಗೆ ಫೈನಲ್ ಕೂಡ ತಲುಪಿದೆವು ಎಂದು ಅವರು ಹೇಳಿದರು.
ಅಭಿಮಾನಿಗಳು ದೀರ್ಘ ಸಮಯದ ನಂತರ ವಾರ್ನರ್ ಆಟವನ್ನು ನೋಡಲು ಸ್ಟೇಡಿಯಂಗೆ ಖಂಡಿತಾಬಂದೇಬರುತ್ತಾರೆ. ಅವರೊಬ್ಬ ಕಲಾತ್ಮಕ ಆಟಗಾರನಾಗಿದ್ದು, ಧವನ್ ತಂಡದಿಂದ ಹೊರ ಹೋಗಿರುವುದರಿಂದ, ಅವರ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಆಟಗಾರ ವಾರ್ನರ್ ಎಂದು ಯೂಸುಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2016-17ರ ಐಪಿಎಲ್ ಸೀಸನ್ನಲ್ಲಿ ಸನ್‌ರೈಸರ್ಸ್ ನಾಯಕತ್ವ ವಹಿಸಿಕೊಂಡಿದ್ದ ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ದ ವಾರ್ನರ್, 2016ರಲ್ಲಿ 848 ರನ್ಗಳಿಸಿ ಸೀಸನ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ 2ನೇ ಆಟಗಾರನಾಗಿದ್ದಲ್ಲದೇ, 2017ರಲ್ಲಿ 641 ರನ್ಗಳಿಸುವ ಮೂಲಕ ಆರೇಂಜ್ ಕ್ಯಾಪ್ ಕೂಡ ಪಡೆದಿದ್ದರು.
ತಮ್ಮ ಸಿದ್ದತೆ ಬಗ್ಗೆ ಕೂಡ ಮಾತನಾಡಿರುವ ಪಠಾಣ್, ಕೋಚ್ಗಳಾದ ಮುರುಳೀಧರನ್ ಹಾಗೂ ಲಕ್ಷ್ಮಣ್ ಬಳಿ ಉತ್ತಮ ಮಾರ್ಗದರ್ಶನ ಪಡೆದಿರುವುದಾಗಿ ತಿಳಿಸಿದ್ದಾರೆ. ತಾವೊಬ್ಬ ಸ್ಪಿನ್ನರ್ ಆಗಿದ್ದು ಮುತ್ತಯ್ಯ ಮುರುಳೀಧರನ್ ಬಳಿ ಸಾಕಷ್ಟು ಕಲಿತಿದ್ದೇನೆ ಎಂದು 36 ವರ್ಷದ ಪಠಾಣ್ ತಿಳಿಸಿದ್ದಾರೆ.