ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಮ್ಮ 5 ವರ್ಷದ ಮಗಳ ಬೇಡಿಕೆಯನ್ನು ಇಡೇರಿಸಲು ಟಿಕ್ಟಾಕ್ಗೆ ಎಂಟ್ರಿಕೊಟ್ಟಿದ್ದಾರೆ.
ಟಿಕ್ಟಾಕ್ನಲ್ಲಿ ತಮ್ಮ ಅಧಿಕೃತ ಖಾತೆ ತೆರೆದಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿಮಾಹಿತಿ ನೀಡಿರುವ ವಾರ್ನರ್, ವಿಡಿಯೋವನ್ನುವೊಂದನ್ನು ಪೋಸ್ಟ್ ಮಾಡುವ ಮೂಲಕ, ಈ ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
- " class="align-text-top noRightClick twitterSection" data="
">
"ಒಕೆ, ಏನಾಗುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ, ಆದರೆ ನನ್ನ 5 ವರ್ಷದ ಮಗುಳು ಟಿಕ್ಟಾಕ್ ಮಾಡಲು ಹೇಳಿದಳು, ಅದಕ್ಕಾಗಿ ಇದನ್ನು ಆರಂಭಿಸಿದ್ದೇನೆ. ನನ್ನ ಖಾತೆಯ ಫಾಲೋವರ್ಸ್ ಸಂಖ್ಯೆ ಶೂನ್ಯವಿದೆ. ನನಗೆ ಸಹಾಯದ ಅಗತ್ಯವಿದೆ" ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ವಿಶ್ವದೆಲ್ಲೆ ಕೊರೊನಾ ಭೀತಿಯಿಂದ ಲಾಕ್ಡೌನ್ ಮೊರೆಹೋಗಲಾಗಿದೆ. ಈ ಹಿಂದೆಯೂ ಡೇವಿಡ್ ವಾರ್ನರ್ ತಮ್ಮ ತಲೆ ಬೋಳಿಸಿಕೊಂಡು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿ ಸವಾಲಾಕಿದ್ದರು. ಇದಕ್ಕೆ ವಿಶ್ವದಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಬಾಲ್ಟ್ಯಾಂಪರಿಂಗ್ ನಂತರ ಸನ್ರೈಸರ್ಸ್ ನಾಯಕತ್ವ ಕಳೆದುಕೊಂಡಿದ್ದ ವಾರ್ನರ್ ಮರಳಿ ನಾಯಕತ್ವ ಪಡೆದಿದ್ದರು. ಆದರೆ ಕೊರೊನಾದಿಂದ ಐಪಿಎಲ್ ಅನಿರ್ಧಸ್ಟಾವಧಿಗೆ ಮುಂದೂಡಲ್ಪಟ್ಟರುವುದರಿಂದ ಮತ್ತೆ ಐಪಿಎಲ್ನಲ್ಲಿ ತಮ್ಮ ನಾಯಕತ್ವ ಪ್ರದರ್ಶನ ತೋರಲು ಕಾಯುತ್ತಿದ್ದ ವಾರ್ನರ್ ಕನಸಿಗೆ ತಣ್ಣೀರೆರಚಿದಂತಾಗಿದೆ.