ETV Bharat / sports

ಈ ಪ್ರಸಿದ್ಧ ಕ್ರಿಕೆಟಿಗನ ಮಗಳು ಕೊಹ್ಲಿಯಂತಾಗಬೇಕಂತೆ... ಯಾರಿವಳು! - ಇಂಡಿ ರೇ ವಾರ್ನರ್​

ಐಪಿಎಲ್​ ಸಮಯದಲ್ಲಿ ಭಾರತದಲ್ಲಿ ಕಾಲ ಕಳೆಯುವ ಡೇವಿಡ್​ ವಾರ್ನರ್​ ಮಗಳು 'ನಾನು ವಿರಾಟ್​​ ಕೊಹ್ಲಿ' ಎಂದು ಹೇಳುತ್ತಾ ಕ್ರಿಕೆಟ್​ ಆಡುತ್ತಿರುವ ವಿಡಿಯೋವನ್ನು ವಾರ್ನರ್​ ದಂಪತಿ ಶೇರ್​ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

David Warner-kohli
author img

By

Published : Nov 10, 2019, 4:24 PM IST

ಸಿಡ್ನಿ: ಐಪಿಎಲ್​ ಸಮಯದಲ್ಲಿ ಭಾರತದಲ್ಲಿ ಕಾಲ ಕಳೆಯುವ ಡೇವಿಡ್​ ವಾರ್ನರ್​ ಮಗಳು 'ನಾನು ವಿರಾಟ್​​ ಕೊಹ್ಲಿ' ಎಂದು ಹೇಳುತ್ತಾ ಕ್ರಿಕೆಟ್​ ಆಡುತ್ತಿರುವ ವಿಡಿಯೋವನ್ನು ವಾರ್ನರ್​ ದಂಪತಿ ಶೇರ್​ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಇತ್ತೀಚೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿರುವ ಖುಷಿಯಲ್ಲಿರುವ ಡೇವಿಡ್​ ವಾರ್ನರ್​ ಬಿಡುವಿನ ವೇಳೆಯನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಕ್ಕಳ ಜೊತೆ ಕ್ರಿಕೆಟ್​ ಆಡುತ್ತಿದ್ದ ವೇಳೆ ಅವರ ಎರಡನೇ ಮಗಳಾದ ಇಂಡಿ ರೇ 'ನಾನು ವಿರಾಟ್​ ಕೊಹ್ಲಿ(I am virat kohli) ಎಂದು ಹೇಳುತ್ತಾ ಬ್ಯಾಟಿಂಗ್​ ನಡೆಸಿದ್ದಾಳೆ.

ಈ ವಿಡಿಯೋವನ್ನು ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿರು ವಾರ್ನರ್​" ಇದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ, ಇಂಡಿ ಕೊಹ್ಲಿಯಂತಾಗಬೇಕೆಂದು ಬಯಸಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.

​ವಾರ್ನರ್​ ಪತ್ನಿ ಕ್ಯಾಂಡೀಸ್​ ವಾರ್ನರ್ ಕೂಡ ಟ್ವಿಟ್ಟರ್​ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು "ಈ ಚಿಕ್ಕ ಹುಡುಗಿ ಹೆಚ್ಚಿನ ದಿನಗಳನ್ನು ಭಾರತದಲ್ಲಿ ಕಳೆದಿದ್ದಾಳೆ. ಅದಕ್ಕೆ ಕೊಹ್ಲಿಯಂತಾಗಬೇಕು ಎಂದು ಬಯಸಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.

ಕೇವಲ 3 ವರ್ಷದ ಮುದ್ದು ಮಗು ಕ್ರಿಕೆಟ್​ನಲ್ಲಿ ವಿಶ್ವಪ್ರಸಿದ್ದರಾಗಿರುವ ಕೊಹ್ಲಿ ಬಗ್ಗೆ ತಿಳಿದುಕೊಂಡಿರುವುದಕ್ಕೆ ಭಾರತೀಯ ಅಭಿಮಾನಿಗಳಲ್ಲದೆ ವಿಶ್ವ ಕ್ರಿಕೆಟ್​ ಅಭಿಮಾನಿಗಳು ಕಾಮೆಂಟ್​ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Intro:Body:Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.