ETV Bharat / sports

ಭಾರತದ ವಿರುದ್ಧ ನಡೆದ ಟಿ-20ಯಲ್ಲಿ ಮಹತ್ವದ ದಾಖಲೆ ಬರೆದ ಡೇವಿಡ್​ ಮಿಲ್ಲರ್​ - ಮಿಲ್ಲರ್​-ಶೋಯಬ್​ ಮಲಿಕ್​

ಭಾರತದ ವಿರುದ್ಧ ನಡೆದ ಟಿ-20 ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾದ ಡೇವಿಡ್​ ಮಿಲ್ಲರ್​ ಫೀಲ್ಡಿಂಗ್​ನಲ್ಲಿ ಚಮತ್ಕಾರ ತೋರಿದ್ದು, ವೃತ್ತಿ ಜೀವನದಲ್ಲಿ 50 ನೇ ಕ್ಯಾಚ್​ ಪಡೆಯುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಫೀಲ್ಡರ್​ ಎನಿಸಿಕೊಂಡಿದ್ದಾರೆ.

David Miller
author img

By

Published : Sep 23, 2019, 1:55 PM IST

ಬೆಂಗಳೂರು: ದಕ್ಷಿಣ ಆಫ್ರಿಕಾದ ಶ್ರೇಷ್ಠ ಫೀಲ್ಡರ್​ ಡೇವಿಡ್ ಮಿಲ್ಲರ್​ ಟಿ-20 ಕ್ರಿಕೆಟ್​ನಲ್ಲಿ 50 ಕ್ಯಾಚ್​ ಪಡೆಯುವುದರ ಮೂಲಕ್ ಪಾಕಿಸ್ತಾನದ ಶೋಯಬ್​​​ ಮಲಿಕ್​ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಭಾನುವಾರ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್​ನಲ್ಲಿ ಹಾರ್ದಿಕ್​ ಪಾಂಡ್ಯ ಅವರ ಕ್ಯಾಚ್​ ಪಡೆಯುವ ಮೂಲಕ ಟಿ-20 ಕ್ರಿಕೆಟ್​ನಲ್ಲಿ 50 ಕ್ಯಾಚ್​ ಪಡೆದು ಮಲಿಕ್​ ದಾಖಲೆ ಸರಿಗಟ್ಟಿದರು.

ಡೇವಿಡ್​ ಮಿಲ್ಲರ್​ ಈ ಮೈಲಿಗಲ್ಲಿಗಾಗಿ 72 ಟಿ-20 ಪಂದ್ಯ ತೆಗೆದುಕೊಂಡರೆ, ಶೋಯಬ್​​​​ ಮಲಿಕ್​ 111 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮಿಲ್ಲರ್​ 39 ಪಂದ್ಯಗಳ ಬಾಕಿ ಉಳಿದಿರುವಂತೆ 50 ಕ್ಯಾಚ್​ ಪಡೆದು ಟಿ-20 ಕ್ರಿಕೆಟ್​ನ ಅತ್ಯುತ್ತಮ ಫೀಲ್ಡರ್​ ಎನಿಸಿಕೊಂಡಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್​ 78 ಪಂದ್ಯಗಳಿಂದ 44, ರಾಸ್​ ಟೇಲರ್​ 90 ಪಂದ್ಯಗಳಿಂದ 44, ಹಾಗೂ ಸುರೇಶ್​ ರೈನಾ 79 ಪಂದ್ಯಗಳಿಂದ 42 ಕ್ಯಾಚ್​ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.