ನವದೆಹಲಿ: ಪಾಕಿಸ್ತಾನ ಕ್ರಿಕೆಟರ್ ದಾನೀಶ್ ಕನೆರಿಯಾ ಪ್ರಥಮ ದರ್ಜೆ ಕ್ರಿಕೆಟ್ ಆಡಲು ಅನುಮತಿ ನೀಡುವಂತೆ ಪಿಸಿಬಿಗೆ ಮನವಿ ಮಾಡಿದ್ದಾರೆ.
ಕನೇರಿಯಾ ಇಂಗ್ಲೆಂಡ್ ಕ್ರಿಕೆಟ್ ಕ್ಲಬ್ ಪರ ಆಡುವಾಗ ಸ್ಪಾಟ್ ಫಿಕ್ಸಿಂಗ್ನಲ್ಲಿ ಪಾಲ್ಗೊಂಡು ಕ್ರಿಕೆಟ್ನಿಂದ ನಿಷೇಧವಾಗಿದ್ದಕ್ಕೆ ಕನೆರಿಯಾ ವಿಷಾದ ವ್ಯಕ್ತಪಡಿಸಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ಆಡಲು ಅನುಮನಿ ನೀಡುವಂತೆ ಪಿಸಿಬಿಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅಧ್ಯಕ್ಷರಿಗೆ ಪತ್ರ ಬರೆಯುವಂತೆ ಕನೇರಿಯಾ ತಮ್ಮ ಕಾನೂನು ತಂಡದ ಮೂಲಕ ಮನವಿ ಮಾಡಿರುವ ಪತ್ರವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿಸಿಬಿ ಅಧ್ಯಕ್ಷ ಎಹ್ಸಾನ್ ಮಣಿಗೆ ಬರೆದ ಪತ್ರದಲ್ಲಿ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಸಹಿಸಲಾಗದ ಕಷ್ಟಗಳನ್ನು ಅನುಭವಿಸಿದ್ದೇನೆ. ಇದರಿಂದ ತಮ್ಮ ಏಕೈಕ ಆದಾಯದ ಮೂಲದ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದಾರೆ.
ಎಸಿಯುಗೆ ಪತ್ರ ಬರೆಯುವ ಅಧಿಕಾರ ಪಿಸಿಬಿಗೆ ಇದೆ. ನಮ್ಮ ಕ್ಲೈಂಟ್ನ ಮನವಿ ಮೇರೆಗೆ ದೇಶೀಯ ಕ್ರಿಕೆಟ್ನಲ್ಲಿ ಆಡಲು ಮತ್ತು ಭಾಗವಹಿಸಲು ಅನುಮತಿ ನೀಡುವಂತೆ ಕೋರಲಾಗಿದೆ.
ದಾನೀಸ್ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ನಿಂದ 261 ವಿಕೆಟ್ ಪಡೆದಿದ್ದಾರೆ ಹಾಗೂ 18 ಏಕದಿನ ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ. ಕನೇರಿಯಾ 2009ರಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಲುಕಿದ್ದರು. ತಮ್ಮ ಮಾಜಿ ಸಹ ಆಟಗಾರ ಮರ್ವಿನ್ ವಿರುದ್ಧ ಓವರ್ಗೆ 12 ರನ್ ಬಿಟ್ಟುಕೊಡುವುದಾಗಿ ಫಿಕ್ಸಿಂಗ್ ಮಾಡಿಕೊಂಡು ಸಿಕ್ಕಿಬಿದ್ದಿದ್ದರು.