ಕೇಪ್ಟೌನ್: ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಸೀಮಿತ ಓವರ್ಗಳ ಕ್ರಿಕೆಟ್‌ನಿಂದ ಅವಕಾಶವಂಚಿತರಾಗಿದ್ದ ವೇಗಿ ಡೇಲ್ ಸ್ಟೈನ್ ಮತ್ತೆ ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಡೇಲ್ ನಂತರ ಫಿಟ್ ಆಗಿದ್ದರೂ ಭಾರತವೂ ಸೇರಿದಂತೆ ಕೆಲವು ಸರಣಿಗಳಲ್ಲಿ ಅವಕಾಶ ಪಡೆದಿರಲಿಲ್ಲ. ಆದರೆ ಈ ಕ್ರಿಕೆಟಿಗ ಈಗಾಗಲೇ ಬಿಬಿಎಲ್ನಲ್ಲಿ ಕಣಕ್ಕಿಳಿದು ತಮ್ಮ ಫಿಟ್ನೆಸ್ ಸಾಬೀತುಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.
-
#BreakingNews Quinton de Kock has been named captain of the Proteas T20 squad that will take on England in the three-match #KFCT20 international series from 12 to 16 Feb in East London, Durban & Centurion. #ProteasT20Squad #Thread pic.twitter.com/gVwD0wGDbY
— Cricket South Africa (@OfficialCSA) February 8, 2020 " class="align-text-top noRightClick twitterSection" data="
">#BreakingNews Quinton de Kock has been named captain of the Proteas T20 squad that will take on England in the three-match #KFCT20 international series from 12 to 16 Feb in East London, Durban & Centurion. #ProteasT20Squad #Thread pic.twitter.com/gVwD0wGDbY
— Cricket South Africa (@OfficialCSA) February 8, 2020#BreakingNews Quinton de Kock has been named captain of the Proteas T20 squad that will take on England in the three-match #KFCT20 international series from 12 to 16 Feb in East London, Durban & Centurion. #ProteasT20Squad #Thread pic.twitter.com/gVwD0wGDbY
— Cricket South Africa (@OfficialCSA) February 8, 2020
"ತಂಡದ ಹಿರಿಯ ಆಟಗಾರರಾದ ಕಗಿಸೋ ರಬಡಾ ಹಾಗೂ ಡುಪ್ಲೆಸಿಸ್ ಅವರಿಗೆ ಟಿ20 ತಂಡದಲ್ಲೂ ವಿಶ್ರಾಂತಿ ನೀಡಲಾಗಿದೆ. ದೇಶಿ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಸಿಸಂಡಾ ಮಗಲಾ ಹಾಗೂ ಪೈಟ್ ವ್ಯಾನ್ ಬಿಲ್ಜಾನ್ ಅವರು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಟಿ20 ವಿಶ್ವಕಪ್ ಇರುವುದರಿಂದ ಕೆಲವು ಹಿರಿಯ ಕ್ರಿಕೆಟಿಗರ ಜೊತೆ ಈಗಾಗಾಲೇ ಹೊಸಬರಿಗೂ ಅವಕಾಶ ನೀಡಲಾಗಿದೆ. ಭಾರತದ ವಿರುದ್ಧ ಯಶಸ್ವಿಯಾಗಿ ತಂಡ ಮುನ್ನಡೆಸಿದ್ದ ಡಿಕಾಕ್ ಇಂಗ್ಲೆಂಡ್ ವಿರುದ್ಧವೂ ಇದೇ ಬುದ್ಧಿಮತ್ತೆ ತೋರಲಿದ್ದಾರೆ ಎಂಬ ನಿರೀಕ್ಷೆಯಿದೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ಡೈರೆಕ್ಟರ್ ಆಫ್ ಕ್ರಿಕೆಟ್ ಗ್ರೇಮ್ ಸ್ಮಿತ್ ತಿಳಿಸಿದ್ದಾರೆ.
ಡೇಲ್ ಸ್ಟೈನ್ ಕಳೆದ ಮಾರ್ಚ್ನಲ್ಲಿ ಕೊನೆಯ ಬಾರಿ ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದರು. 2020ರ ವಿಶ್ವಕಪ್ನಲ್ಲಿ ಆಡುವ ಉದ್ದೇಶವಿರುವ ಡೇಲ್ ಸ್ಟೈನ್ 44 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 61 ವಿಕೆಟ್ ಪಡೆದಿದ್ದಾರೆ.