ETV Bharat / sports

'ಧೋನಿ ಜೊತೆ ಆಡುವುದು ಕನಸಿಗಿಂತಲೂ ದೊಡ್ಡದು'.. ಭಾವನಾತ್ಮಕ ಸಂದೇಶ ಹಂಚಿಕೊಂಡ ಗಾಯಕ್ವಾಡ್​ - ಇಂಡಿಯನ್ ಪ್ರೀಮಿಯರ್ ಲೀಗ್​

ಆದರೆ ಕೊನೆಯ 3 ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 199 ರನ್​ಗಳಿಸಿದ್ದ ರುತುರಾಜ್ ಗಾಯಕ್ವಾಡ್​ ಸಿಎಸ್​ಕೆ ನಾಯಕ ಧೋನಿ ಕುರಿತು ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಧೋನಿ ಜೊತೆ 22 ಅಡಿ ಕ್ರೀಸ್​ನಲ್ಲಿ ಜೊತೆಯಾಗಿ ಆಡುವುದು ಕನಸಿಗಿಂತಲೂ ದೊಡ್ಡದಾದ ಭಾವನೆ ಎಂದು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹೇಳಿಕೊಂಡಿದ್ದಾರೆ..

ರುತುರಾಜ್ ಗಾಯಕ್ವಾಡ್​
ರುತುರಾಜ್ ಗಾಯಕ್ವಾಡ್​
author img

By

Published : Nov 4, 2020, 6:58 PM IST

ದುಬೈ: ಐಪಿಎಲ್ ಇತಿಹಾಸದಲ್ಲಿ ಆಡಿದ್ದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ್ದ ಸಿಎಸ್​ಕೆ ಈ ಬಾರಿ 7ನೇ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ತಂಡ ಮೊದಲಾರ್ಧದಲ್ಲಿ ವೈಫಲ್ಯ ಅನುಭಿವಿಸಿದರೂ ಕೊನೆಯ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನದ ಮೂಲಕ 3 ಪಂದ್ಯಗಳಲ್ಲಿ ಗೆದ್ದು 12 ಅಂಕ ಪಡೆದು ಟೂರ್ನಿಯಿಂದ ಹೊರ ಬಿದ್ದಿತು.

ಆದರೆ, ಕೊನೆಯ 3 ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ 199 ರನ್​ಗಳಿಸಿದ್ದ ರುತುರಾಜ್ ಗಾಯಕ್ವಾಡ್​ ಸಿಎಸ್​ಕೆ ನಾಯಕ ಧೋನಿ ಕುರಿತು ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಧೋನಿ ಜೊತೆ 22 ಅಡಿ ಕ್ರೀಸ್​ನಲ್ಲಿ ಜೊತೆಯಾಗಿ ಆಡುವುದು ಕನಸಿಗಿಂತಲೂ ದೊಡ್ಡದಾದ ಭಾವನೆ ಎಂದು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹೇಳಿಕೊಂಡಿದ್ದಾರೆ.

"2016ರ ಅಕ್ಟೋಬರ್​ನಲ್ಲಿ ರಣಜಿ ಪಂದ್ಯದ ವೇಳೆ ನಾನು ಮೊದಲ ಬಾರಿಗೆ ಧೋನಿಯನ್ನು ಭೇಟಿ ಮಾಡಿದ್ದೆ. ಅದು ನನ್ನ ಮೊದಲ ರಣಜಿ ಆವೃತ್ತಿಯಾಗಿತ್ತು. ಧೋನಿ ಜಾರ್ಖಂಡ್​ ತಂಡದ ಮೆಂಟರ್ ಆಗಿದ್ದರು. ಆ ಸಂದರ್ಭದಲ್ಲಿ ನಾನು ಬೆರಳು ಮುರಿದುಕೊಂಡಿದ್ದೆ.

ಆಗ ಸ್ವತಃ ಧೋನಿ ನನ್ನ ಬಳಿ ಬಂದು ಹೇಗಿದ್ದೀಯಾ ಎಂದು ಕೇಳಿದ್ದರು" ಎಂದು ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದು, ಧೋನಿ ಆಟೋಗ್ರಾಫ್ ನೀಡುತ್ತಿರುವ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. "2020 ಅಕ್ಟೋಬರ್​ನಲ್ಲಿ ಸತತ 3 ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿದ್ದೆ. ಆಗಲೂ ಕೂಡ ಅವರಾಗಿಯೇ ನನ್ನ ಬಳಿ ಬಂದು ಜೀವನದ ಬಗ್ಗೆ ಮಾತನಾಡಿದ್ದರು.

ನಾನು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು, ನನ್ನ ಪಾಲಿನ ಅದೃಷ್ಟ. ಅದಕ್ಕಿಂತಲೂ ಅವರ ಜೊತೆ 22 ಅಡಿಗಳ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡಿ, ತಂಡದ ಗೆಲುವಿನ ಭಾಗವಾಗಿದ್ದು, ಕನಸಿಗಿಂತಲೂ ಹೆಚ್ಚಿನದು" ಎಂದು ಸುದೀರ್ಘವಾದ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.